ಟಿಪ್ಪರ್​ ಡಿಕ್ಕಿಯಾಗಿ ಯುವಕರಿಬ್ಬರು ಸಾವು

accident
Published on

ಬೆಳಗಾವಿ: ತಾಲೂಕಿನ ಪಂತ ಬಾಳೇಕುಂದ್ರಿಯ ಪಂತ ನಗರ ಬಳಿ ಶನಿವಾರ ರಾತ್ರಿ ಬೈಕ್​ಗೆ ಟಿಪ್ಪರ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಸುಳೇಬಾವಿ ಗ್ರಾಮದ ಸೋಮನಾಥ ಪ್ರಭು ಖವಾಶಿ (22), ವಿಠ್ಠಲ ಗಣಪತಿ ಡವಳಿ (22) ಮೃತಪಟ್ಟವರು. ಬೆಳಗಾವಿಯಿಂದ ಸುಳೇಬಾವಿಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್​ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಟಿಪ್ಪರ್​ ಕೆಳಗೆ ಸಿಕ್ಕು ನಜ್ಜುಗುಜ್ಜಾಗಿದೆ. ವಿಠ್ಠಲ ಡವಳಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಸೋಮನಾಥ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಟಿಪ್ಪರ್​ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾರಿಹಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net