ಟಿಪ್ಪರ್ ಹರಿದು ಪಿಯು ವಿದ್ಯಾರ್ಥಿನಿ ಸಾವು; ಮತ್ತಿಬ್ಬರಿಗೆ ಗಾಯ

SGR WEB
Published on

ಸಾಗರ: ನಗರದ ಜೋಗ ರಸ್ತೆಯಲ್ಲಿ ಬುಧವಾರ ಹಾಸ್ಟೆಲ್‌ನಿಂದ ಕಾಲೇಜಿಗೆ ಬರುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಲಾರಿ ಹರಿದು ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ, ಶಿಕಾರಿಪುರ ತಾಲೂಕು ಚಿಕ್ಕಕಲವತ್ತಿ ಗ್ರಾಮದ ಪರಶುರಾಮಪ್ಪ ಮತ್ತು ನಿರ್ಮಲಾ ಅವರ ಪುತ್ರಿ ಎಂ.ಪಿ.ಪ್ರತಿಮಾ ಮೃತ ದುರ್ದೈವಿ. ಶಿಕಾರಿಪುರ ತಾಲೂಕು ಸಂಡ ಗ್ರಾಮದ ನಾಗರಾಜ್ ಮತ್ತು ಗೌರಮ್ಮ ಅವರ ಪುತ್ರಿ ಬಿ.ಎನ್.ಅಂಕಿತಾ ಮತ್ತು ಸೊರಬ ತಾಲೂಕು ಪುಟ್ಟನಹಳ್ಳಿ ಗ್ರಾಮದ ವೀರಭದ್ರ ಗೌಡ ಅವರ ಪುತ್ರಿ ವಿ.ಐಶ್ವರ್ಯಾ ಗಾಯಗೊಂಡಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವರದಹಳ್ಳಿ ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್‌ನಿಂದ ಈ ವಿದ್ಯಾರ್ಥಿನಿಯರು ಬುಧವಾರ ಕಾಲೇಜಿಗೆ ತೆರಳುವ ವೇಳೆ ಸಣ್ಣಮನೆ ಸೇತುವೆ ಸಮೀಪ ಎಂ.ಸ್ಯಾಂಡ್ ತುಂಬಿದ ಟಿಪ್ಪರ್ ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿಪ್ರತಿಮಾ ತೀವ್ರವಾಗಿ ಗಾಯಗೊಂಡಿದ್ದು ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಸಾರ್ವಜನಿಕರು ಟಿಪ್ಪರ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net