ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ನಡೆದ ಅಫಘಾತ.!

ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ನಡೆದ ಅಫಘಾತ.!
Published on

ಬೇಲೂರು: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತ ಪಟ್ಡಿರುವ ಘಟನೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದ ಸಮೀಪ ಬುಧವಾರ ನಡೆದಿದೆ.


ಬೇಲೂರು ತಾಲೂಕಿನ ಕರ್ಕಿಹಳ್ಳಿ ಗ್ರಾಮದ 25 ವರ್ಷದ ಕಿರಣ್ ಕೆಲಸದ ನಿಮಿತ್ತ ಬಳ್ಳೂರು ಗ್ರಾಮ ಸಮೀಪದ ಆಲೂರಿಗೆ ಬೈಕ್‌ನಲ್ಲಿ ತೆರಳುತಿದ್ದರು. ಈ ಸಂದರ್ಭ ಬೇಲೂರು ಕಡೆಯಿಂದ ಬಂದ ಎಂಸ್ಯಾಂಡ್ ತುಂಬಿದ್ದ ಟಿಪ್ಪರ್ ಲಾರಿ ಬೈಕ್ ಸವಾರನಿಗೆ ಗುದ್ದಿದೆ. ತಕ್ಷಣ ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭ ಟಿಪ್ಪರ್ ಲಾರಿ ಬೈಕ್ ಸವಾರನ ಮೇಲೆಯೇ ಹರಿದಿದ್ದರಿಂದ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.


ಮೃತನಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದು, ಗಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಬುಧವಾರ ಮೃತನ ಸ್ವಗ್ರಾಮದಲ್ಲಿ ನೆರವೇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net