

ಲಕ್ಷ್ಮೇಶ್ವರ: ಪಟ್ಟಣದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಯ ಇಟ್ಟಿಗೆರೆ ಕರೆಯ ಹತ್ತಿರ ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿನಿ ಸೇರಿ ಇಬ್ಬರು ಬಲಿಯಾದ ಹೃದಯ ವಿದ್ರಾವಕ ಘಟನೆ ಶನಿವಾರ ಸಂಜೆ ಜರುಗಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ರತ್ನಾ ಚಂದ್ರು ಮಹೇಂದ್ರಕರ್ (14) ಹಾಗೂ ಗೊಜನೂರ ಗ್ರಾಮದ ಫಕ್ಕೀರಯ್ಯ ಹಿರೇಮಠ(45) ಸಾವಿಗೀಡಾದ ದುರ್ದೈವಿಗಳು.
ಘಟನೆ ವಿವರ: ಫಕ್ಕೀರಯ್ಯ ಹಿರೇಮಠ ಎಂಬುವರು ಸಂಬಂಧಿ ರತ್ನಾ ಮತ್ತು ಸಚಿನ್ ಎಂಬ ಮೂರು ವರ್ಷದ ಮಗುವಿನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಖಡಿ ಸಾಗಿಸುತ್ತಿದ್ದ ಟಿಪ್ಪರ್ ಬೈಕ್ಗೆ ಅಪ್ಪಳಿಸಿದೆ. ಈ ವೇಳೆ ವಿದ್ಯಾರ್ಥಿನಿ ಮತ್ತು ಬೈಕ್ ಸವಾರ ಟಿಪ್ಪರ್ನ ಚಕ್ರದಡಿ ಸಿಲುಕಿದ್ದಾರೆ. ರತ್ನಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಫಕ್ಕೀರಯ್ಯ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬಾಲಕ ಸಚಿನ್ ಮಾತ್ರ ಅದೃಷ್ಟವಶಾತ್ ಪಾರಾಗಿದ್ದು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಟಿಪ್ಪರ್ನ ಚಾಲಕ ಸ್ಥಳದಲ್ಲಿಯೇ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಕರ ಆಕ್ರಂದನ: ಮೃತ ವಿದ್ಯಾರ್ಥಿನಿಯ ತಂದೆ ಪಟ್ಟಣದಲ್ಲಿ ನೂಲಿನ ಗಿರಣಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದು ಮಗಳ ಧಾರುಣ ಸಾವು ಕಂಡು ನೆಲಕ್ಕುರುಳಿ ಗೋಳಾಡಿದರು. ಬಾಲಕಿ ಶನಿವಾರವಷ್ಟೇ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಂತ ಸಂಭ್ರಮದಿಂದ ಓಡಾಡಿದ್ದನ್ನು ನೆನೆದ ಗೆಳತಿಯರೂ ಬಿಕ್ಕಿಬಿಕ್ಕಿ ಅತ್ತ ದೃಶ್ಯ ಕರುಳು ಹಿಂಡುವಂತಿತ್ತು.
ಸಾರ್ವಜನಿಕರ ಆಕ್ರೋಶ: ತಾಲೂಕಿನ ಸುತ್ತಲಿನ ಪ್ರದೇಶಗಳಲ್ಲಿ ತಲೆ ಎತ್ತಿರುವ ಪ್ರಭಾವಿಗಳ ಕ್ರಷರ್ಗಳು ಉತ್ಪಾದಿಸುವ ಎಂಸ್ಯಾಂಡ್, ಖಡಿ, ಕಲ್ಲಿಪುಡಿ ಮತ್ತು ಮರಳು ಸಾಗಿಸುವ ಟಿಪ್ಪರ್ ಲಾರಿಗಳ ಅಬ್ಬರಕ್ಕೆ ಪಟ್ಟಣ ಸೇರಿ ತಾಲೂಕಿನ ಜನತೆ ರೋಸಿ ಹೋಗಿದ್ದಾರೆ. ಹಗಲೂ-ರಾತ್ರಿ ಓವರ್ ಲೋಡ್ನೊಂದಿಗೆ ಲಂಗು-ಲಗಾಮಿಲ್ಲದೆ ಸಂಚರಿಸುವ ವಾಹನಗಳಿಗೆ ಸಂಬಂಧಪಟ್ಟ ಆರ್ಟಿಒ, ಕಂದಾಯ, ಪೊಲೀಸ್ ಎಲ್ಲರೂ ಸೇರಿ ಯಾವುದೇ ಮುಲಾಜಿಲ್ಲದೆ ಲಂಗು-ಲಗಾಮು ಹಾಕಬೇಕು. ಪಟ್ಟಣಕ್ಕೆ ವಿದ್ಯಾರ್ಥಿಗಳು ಸೇರಿ ನಿತ್ಯ ಸಾವಿರಾರು ಜನರು ಬರುತ್ತಾರೆ. ಬೆಳಗ್ಗೆ 10 ರಿಂದ ಸಂಜೆ 6 ವರೆಗೆ ಕಲ್ಲು, ಖಡಿ, ಮರಳು, ಎಂಸ್ಯಾಂಡ್ ಸಾಗಿಸುವ ವಾಹನ ಸಂಚಾರ ನಿಷೇಧಿಸಬೇಕು. ಇಲ್ಲದಿದ್ದರೆ ಇನ್ನೂ ಅದೆಷ್ಟು ಜೀವಗಳು ಬಲಿಯಾಗುತ್ತವೆಯೋ ದೇವರೇ ಬಲ್ಲ. ಜನರು ಬೀದಿಗಿಳಿಯುವ ಮೊದಲೇ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಾ.ಪಂ. ಮಾಜಿ ಸದಸ್ಯ ಚನ್ನಪ್ಪ ಜಗಲಿ, ಜೆಡಿಎಸ್ ತಾಲೂಕಾಧ್ಯಕ್ಷ ಪದ್ಮರಾಜ ಪಾಟೀಲ ಆಗ್ರಹಿಸಿದ್ದಾರೆ.
4.ಎ: ಮೃತ ವಿದ್ಯಾರ್ಥಿನಿ ರತ್ನಾಳ ತಂದೆ ಪಾಲಕರು ರೋದಿಸುತ್ತಿರುವ ದೃಶ್ಯ.
-----------
ಸಿಬ್ಬಂದಿ ಇಲ್ಲದೆ ಸೊರಗಿದ ಠಾಣೆ
ಪೊಲೀಸರ ನೆರವು ಕೇಳಲು ಬಂದವರಿಗಿಲ್ಲ ಆಸರೆ | ಮಿತಿಮೀರಿವೆ ಅಕ್ರಮ ದಂಧೆ
ವಿಜಯವಾಣಿ ಸುದ್ದಿಜಾಲ ಮುಳಗುಂದ
ಪಟ್ಟಣ ಹಾಗೂ ಸುತ್ತಲಿನ 16 ಗ್ರಾಮಗಳನ್ನೊಳಗೊಂಡ ಮುಳಗುಂದ ಪೊಲೀಸ್ ಠಾಣೆ ಸಮರ್ಪಕ ಸಿಬ್ಬಂದಿ ಇಲ್ಲದೆ ಅನಾಥವಾಗಿದೆ. ಇದ್ದ ಕೆಲವೇ ಕೆಲ ಸಿಬ್ಬಂದಿಗೆ ಕೆಲಸದ ಒತ್ತಡವಿದ್ದರೆ, ಸಹಾಯ ಕೇಳಲು ಬಂದು- ಹೋಗುವವರು ಪೊಲೀಸರು ಬರುವ ದಾರಿ ಕಾಯುತ್ತ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಪಿಎಸ್ಐ ನೇಮಕವಿಲ್ಲ: ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಶಿವರಾಜ ಧನಿಗೋಳ 2019ರ ನವೆಂಬರ್ 2ರರಂದು ವರ್ಗಾವಣೆಗೊಂಡಿದ್ದು, ಈವರೆಗೂ ಆ ಹುದ್ದೆ ಭರ್ತಿ ಮಾಡಿಲ್ಲ. ಕಳೆದ ಆರೇಳು ತಿಂಗಳಿಂದ ವರ್ಗಾವಣೆಯಾಗಿ ಬಂದ ಯಾರೊಬ್ಬರೂ ಪೂರ್ಣ ಪ್ರಮಾಣದ ಕೆಲಸ ಮಾಡದೆ ತಮಗೆ ಬೇಕಾದ ಠಾಣೆಗೆ ವರ್ಗಾವಣೆ ಮಾಡಿಸಿಕೊಂಡು ತೆರಳುತ್ತಿದ್ದಾರೆ. ಇದರಿಂದ ಕೇವಲ ಎಎಸ್ಐಗಳಿಂದ ಮಾತ್ರ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಸದ್ಯ ಠಾಣೆಗೆ ಓರ್ವ ಪಿಎಸ್ಐ ಹಾಗೂ ಎಂಟು ಜನ ಸಿಬ್ಬಂದಿ ಕೊರತೆಯಿದ್ದು ಈಗ ಮೂವರು ಎಎಸ್ಐ, ಮೂವರು ಮಹಿಳಾ ಪೊಲೀಸ್, ಕೆಲವೇ ಕೆಲವು ಪಿಸಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಳಗುಂದ, ನೀಲಗುಂದ ಗ್ರಾಮದಿಂದ ಸೊರಟೂರ, ಮಹಾಲಿಂಗಪೂರ ತಾಂಡಾಗಳನ್ನೊಳಗೊಂಡು ಮುಳಗುಂದ ಪೊಲೀಸ್ ಠಾಣೆಗೆ ನಿತ್ಯ ಹಲವಾರು ಸಮಸ್ಯೆಗಳನ್ನು ಹೊತ್ತು ಬರುವ ಜನರು ನ್ಯಾಯಕ್ಕಾಗಿ ಅಲೆದಾಡುವಂತಾಗಿದೆ. ಅಲ್ಲದೆ, ಸ್ಥಳೀಯ ಪೊಲೀಸರನ್ನು ದೂರದ ಜಿಲ್ಲೆಗಳಿಗೆ ಬಂದೋಬಸ್ತ್ಗಾಗಿ ನಿಯೋಜನೆ ಮಾಡುವುದರಿಂದ ಸ್ಥಳೀಯ ಸಮಸ್ಯೆಗಳನ್ನು ಕೇಳುವವರು ಇಲ್ಲದಂತಾಗಿದೆ.
----ಬಾಕ್ಸ್------
ಎಗ್ಗಿಲ್ಲದೆ ಸಾಗಿದ ಅಕ್ರಮ ಮರಳು ಸಾಗಾಟ
ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿ ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಸಿಬ್ಬಂದಿಗೆ ವಸತಿ ವ್ಯವಸ್ಥೆ ಸೇರಿ ಎಲ್ಲ ಮೂಲಸೌಲಭ್ಯಗಳಿದ್ದು ಸಿಬ್ಬಂದಿ ವರ್ಗಾವಣೆಗೊಂಡು ಹೋಗುತ್ತಿರುವುದರಿಂದ ಠಾಣೆ ಅನಾಥವಾದಂತಾಗಿದೆ. ಹೀಗಾಗಿ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿದ್ದು, ಸುತ್ತಮುತ್ತಲಿನ ಹಳ್ಳಗಳಿಂದ ಅಕ್ರಮವಾಗಿ ಮರಳು ಸಾಗಣೆ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಜೂಜಾಟ, ಮೀಟರ್ ಬಡ್ಡಿ ವ್ಯವಹಾರ, ಅಕ್ರಮ ಕಲ್ಲು ಗಣಿಗಾರಿಕೆ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ದಂಧೆೆ ಅವ್ಯಾಹತವಾಗಿ ನಡೆದಿದೆ. ಅಷ್ಟೇ ಅಲ್ಲದೆ, ಇಲ್ಲಿನ ಕಲ್ಲು ಗಣಿಗಾರಿಕೆ ಕಂಪನಿಗಳು ನಕಲಿ ಬಿಲ್ಲು ಸೃಷ್ಟಿಸಿ ಟಿಪ್ಪರ್ಗಳಲ್ಲಿ ಹಗಲು ರಾತ್ರಿ ಎನ್ನದೆ ಎಂ-ಸ್ಯಾಂಡ್, ಕಡಿ ಸಾಗಾಟ ನಡೆಸಿವೆ. ಇವುಗಳ ಮೇಲೆ ನಿಗಾ ವಹಿಸವವರು ಯಾರು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
5ಎಂಯುಎಲ್1:
ಸಿಬ್ಬಂದಿಯಿಲ್ಲದೆ ಬಣಗುಡುತ್ತಿರುವ ಮುಳಗುಂದ ಪೊಲೀಸ್ ಠಾಣೆ.
EndFragment