ಟಿಪ್ಪರ್​ ಪಲ್ಟಿಯಾಗಿ ಚಾಲಕ ಮೃತ

Published on

ಹುಲಿಯೂರುದುರ್ಗ: -ಎಂ ಸ್ಯಾಂಡ್​ ತುಂಬಿಕೊಂಡು ಹೊಗುತ್ತಿದ್ದ ಟಿಪ್ಪರ್​ ಲಾರಿ ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 85 ಕೆಂಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಾದಗಿರಿಯ ಚಾಲಕ ಶರಣಪ್ಪ (28) ಮೃತ. ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net