ಟಿಕಾಯತ್​ ಮೇಲಿನ ಹಲ್ಲೆಗೆ ಖಂಡನೆ: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

01
Published on

ತುಮಕೂರು: ರೈತ ನಾಯಕ ರಾಕೇಶ್​ಸಿಂಗ್​ ಟಿಕಾಯತ್​ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆ ಖಂಡಿಸಿ, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂದ ಗೌರವಾಧ್ಯಕ್ಷರೂ ಆದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡು ಪ್ರತಿಭಟನೆ ನಡೆಸಲಾಯಿತು.

ರೈತರು, ಪ್ರಗತಿಪರ ಚಿಂತಕರು, ದಲಿತ ಸಂರ್ಷ ಸಮಿತಿ ಸದಸ್ಯರು, ಮಹಿಳಾ ಹೋರಾಟಗಾರರು, ಕನ್ನಡಪರ ಸಂಟನೆಗಳ ಸದಸ್ಯರು ಪಾಲ್ಗೊಂಡು, ಸರ್ಕಾರದ ವಿರುದ್ದ, ಗೃಹಮಂತ್ರಿಗಳ ವಿರುದ್ಧ ೂಷಣೆ ಕೂಗಿದರು.

ಸಿಎಂ ಹಾಗೂ ಗೃಹಮಂತ್ರಿಗಳು ರೈತರ ಕ್ಷಮೆ ಕೇಳಬೇಕು ಹಾಗೂ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಿ, ಕಠಿಣ ಶಿೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ ರೈತರು, ಪ್ರಗತಿಪರ ಚಿಂತಕರು, ಕರವೇ ಕಾರ್ಯಕರ್ತರು ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತ ಸಂದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರೈತ ನಾಯಕ ರಾಕೇಶ್​ಸಿಂಗ್​ ಟಿಕಾಯತ್​ ಮೇಲಿನ ಹಲ್ಲೆ ರಾಜ್ಯದ ಇತಿಹಾಸದಲ್ಲಿಯೇ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಅತಿಥಿ ದೇವೋಭವ ಎಂಬುದು ಕರ್ನಾಟಕದ ಸಂಸತಿ. ಇದಕ್ಕೆ ವಿರುದ್ಧವೆಂಬಂತೆ ರಾಜ್ಯಕ್ಕೆ ಅತಿಥಿಯಾಗಿ ಬಂದ ರೈತ ನಾಯಕ ರಾಕೇಶ್​ಸಿಂಗ್​ ಟಿಕಾಯತ್​ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿರುವುದು ಇಡಿ ರಾಜ್ಯಕ್ಕೆ ಮಾಡಿದ ಅಪಮಾನ ಎಂದು ಹರಿಹಾಯ್ದರು.

ಇಡೀ ದೇಶದ ರೈತ ಸಮೂಹ ಉಗ್ರವಾಗಿ ಖಂಡಿಸುತ್ತದೆ, ರಾಜ್ಯದ ಸಿಎಂ ಹಾಗೂ ಗೃಹಮಂತ್ರಿ ಕೂಡಲೇ ಅವರ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದವರನ್ನು ಬಂಧಿಸಿ, ಉಗ್ರ ಶಿೆಗೆ ಗುರಿಪಡಿಸಬೇಕು. ಇಂತಹ ಟನೆಗಳು ಮರುಕಳುಹಿಸದಂತೆ ಸರ್ಕಾರ ಎಚ್ಚರ ವಹಿಸಬೇಕು. ರೈತ ನಾಯಕರ ಪ್ರವಾಸದ ವೇಳೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಗತಿಪರ ಚಿಂತಕ ಡಾ.ಬಸವರಾಜು ಮಾತನಾಡಿ, ರಾಕೇಶ್​ಸಿಂಗ್​ ಟಿಕಾಯತ್​ ರೈತ ವಿರೋಧಿ ಕಾಯ್ದೆಗಳ ವಾಪಸ್ಸ್​ಗೆ ಆಗ್ರಹಿಸಿ, ಒಂದು ವರ್ಷ ಹದಿಮೂರು ದಿನ ನಿರಂತರ ಹೋರಾಟ ರೂಪಿಸಿದ್ದ ನಾಯಕನ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.

ಸಾಹಿತಿ ಡಾ.ಜಿ.ವಿ.ಆನಂದಮೂರ್ತಿ, ರೈತ ಸಂದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಉದ್ಯಮಿ ತಾಜುದ್ದೀನ್​ ಷರೀಫ್​, ಡಿಎಸ್​ಎಸ್​ನ ಪಿ.ಎನ್​.ರಾಮಯ್ಯ, ರಂಗಧಾಮಯ್ಯ, ಎಐಎಂಎಸ್​ಎಸ್​ನ ಕಲ್ಯಾಣಿ, ಮಂಜುಳ ಗೋನಾಳ, ಎಐಕೆಕೆಎಂಎಸ್​ನ ರತ್ನಮ್ಮ, ಪಂಡಿತ್​ ಜವಹರ್​ ಮತ್ತಿತರರು ಇದ್ದರು.=

ರಾಜ್ಯ ಸರ್ಕಾರ ರೋಹಿತ್​ ಚಕ್ರತಿರ್ಥ ಎಂಬ ಅರೆಬರೆ ತಿಳಿವಳಿಕೆ ಉಳ್ಳ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ, ಇಡೀ ಶೈಕ್ಷಣಿಕ ವಲಯವನ್ನೇ ಗೊಂದಲದ ಗೂಡಾಗಿದೆ. ರೈತ ನಾಯಕನ ಮೇಲೆ ಹಲ್ಲೆಯಾಗಿದೆ. > ಗೋವಿಂದರಾಜು ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net