ಟಿಎಪಿಸಿಎಂಎಸ್​ 11 ನಿರ್ದೇಶಕರು ಅವಿರೋಧ ಆಯ್ಕೆ

19 sgr 3
Published on

ಸಾಗರ: ಸಾಗರ ಟಿಎಪಿಸಿಎಂಎಸ್​ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘನಲ್ಲಿ ಸಹಕಾರ ಭಾರತಿ ಬೆಂಬಲಿತ 11 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾದ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಟಿಎಪಿಎಂಸಿಎಸ್​ನ 11 ಸ್ಥಾನಕ್ಕೆ ಸಹಕಾರ ಭಾರತಿಯಿಂದ ಸ್ಪರ್ಧೆ ಮಾಡಿದ್ದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿರುವುದು ಸಹಕಾರ ಕ್ಷೇತ್ರದಲ್ಲಿ ಸಹಕಾರ ಭಾರತಿ ಮಾಡಿಕೊಂಡು ಬರುತ್ತಿರುವ ಉತ್ತಮ ಕೆಲಸಕ್ಕೆ ಸಾಕ್ಷಿಯಾಗಿದೆ ಎಂದರು.

ಟಿಎಪಿಸಿಎಂಎಸ್ ಗ್ರಾಮೀಣ ಭಾಗದ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳ ಮಾತೃಸಂಸ್ಥೆಯಾಗಿದೆ. ಅನೇಕ ಆಶಯಗಳೊಂದಿಗೆ ಸಂಸ್ಥೆಯನ್ನು ಕಟ್ಟಲಾಗಿತ್ತು. ಆದರೆ ಕೆಲವರ ಸ್ವಹಿತಾಸಕ್ತಿಯಿಂದ ಸಂಸ್ಥೆ ಇದೀಗ ನಷ್ಟದಲ್ಲಿದ್ದು ನೂತನ ಆಡಳಿತ ಮಂಡಳಿಯು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ, ಸಹಕಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಪುನಶ್ಚೇತನಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಶಾಸಕ ಹರತಾಳು ಹಾಲಪ್ಪ ಕೂಡ ಭರವಸೆ ನೀಡಿದ್ದಾರೆ. ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯ ಕಲ್ಪಿಸಲಾಗುತ್ತದೆ. ಹಿಂದಿನಂತೆ ಸಂಸ್ಥೆಯು ಅಡಕೆ ಖರೀದಿ, ಗೊಬ್ಬರ, ಮೈಲುತá-ತ್ತ ಮಾರಾಟದಂತಹ ಕೃಷಿಕರಿಗೆ ಅನುಕೂಲವಾಗುವ ಕೆಲಸಗಳಲ್ಲಿ ತೊಡಗಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ನೂತನ ನಿರ್ದೇಶಕ ಲೋಕನಾಥ್ ಬಿಳಿಸಿರಿ ಮಾತನಾಡಿ, ಶಾಸಕರು ಹಾಗೂ ಸಹಕಾರ ಭಾರತಿಯ ಎಲ್ಲರ ಸಹಕಾರದಿಂದ 11 ಸದಸ್ಯರು ಆ್ಕಯೆಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಅಂಟಿರುವ ಕಳಂಕವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ ಎಂದರು.

ಮ್ಯಾಮ್ಕೋಸ್ ನಿರ್ದೇಶಕ ದಿನೇಶ್ ಬರದವಳ್ಳಿ, ಆಪ್ಸ್​ಕೋಸ್ ನಿರ್ದೇಶಕ ಆರ್.ಎಸ್.ಗಿರಿ, ಎಪಿಎಂಸಿ ಸದಸ್ಯ ರಾಜಶೇಖರ ಹಂದಿಗೋಡು, ಪ್ರಮುಖರಾದ ಚಂದ್ರಶೇಖರ ಮಗೆಕೊಪ್ಪ, ಲಕ್ಷ್ಮೀನಾರಾಯಣ್, ಸತ್ಯನಾರಾಯಣ್, ಅಣ್ಣಾಜಿ ಗೌಡ, ಶ್ರೀಕಂಠ ಗೌಡ, ರಾಜೇಂದ್ರ ಆವಿನಹಳ್ಳಿ, ಪ್ರಕಾಶ್ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net