ಟಿಎಪಿಸಿಎಂಎಸ್ ನಿರ್ದೇಶಕರ ಆಯ್ಕೆಗೆ ಮತದಾನ

26HBH 1
Published on

ಹಗರಿಬೊಮ್ಮನಹಳ್ಳಿ: ವ್ಯವಸಾಯ ಉತ್ಪನ್ನ ಮತ್ತು ಮಾರಾಟ ಸಹಕಾರಿ ಸಂಘಕ್ಕೆ ಪಟ್ಟಣದ ಹಳೆಯ ಊರಿನ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಮತದಾನ ನಡೆಯಿತು.

ಎ ವಿಭಾಗದ ಐದು ಸ್ಥಾನಗಳಿಗೆ ಸಹಕಾರ ಸಂಘಗಳ 16 ಜನ ಪ್ರತಿನಿಧಿಗಳ ಪೈಕಿ 10 ಜನ ಸ್ಪರ್ಧಿಸಿದ್ದರು. ಈ ಪೈಕಿ ಅಭ್ಯರ್ಥಿಯೊಬ್ಬರಿಗೆ ಕೋರ್ಟ್ ಅನರ್ಹಗೊಳಿಸಿದ್ದರಿಂದ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿ ವಿಭಾಗದ ಏಳು ಸ್ಥಾನಗಳಿಗೆ 15 ಜನ ಸ್ಪರ್ಧಿಸಿದ್ದು, 542 ಮತದಾರರ ಪೈಕಿ 518 ಜನರು ಮತ ಚಲಾಯಿಸಿದರು. ತಹಸೀಲ್ದಾರ್ ಆರ್.ಕವಿತಾ ಚುನಾವಣಾಧಿಕಾರಿ ಹಾಗೂ ಮುಷ್ತಾಕ್ ಅಹಮ್ಮದ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ವಿಕಾಸ್ ಲಮಾಣಿ, ಪಟ್ಟಣ, ಕೊಟ್ಟೂರು, ಮರಿಯಮ್ಮನಹಳ್ಳಿ, ತಂಬ್ರಹಳ್ಳಿ, ಗುಡೆಕೋಟೆ, ಕಾನಾಹೊಸಹಳ್ಳಿ ಪಿಎಸ್‌ಐಗಳು ಬಂದೋಬಸ್ತ್ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net