

ಕೆ.ಆರ್.ಪೇಟೆ: ತಾಲೂಕಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ.
11 ಮಂದಿ ಜೆಡಿಎಸ್ ಬೆಂಬಲಿಗರು ಆಯ್ಕೆಯಾಗುವ ಮೂಲಕ ಜೆಡಿಎಸ್ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಕೇವಲ 3 ಸ್ಥಾನ ಗಳಿಸುವ ಮೂಲಕ ಹೀನಾಯ ಸೋಲು ಕಂಡಿದ್ದು ಅಧಿಕಾರ ಹಿಡಿಯುವ ಆಸೆ ಕೈತಪ್ಪಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಶಾಸಕ ಎಚ್.ಟಿ.ಮಂಜು ಹಿನ್ನಡೆಗೆ ಕೈ ಮುಖಂಡರು ಭಾರಿ ಕಸರತ್ತು ನಡೆಸಿದ್ದರು. ಮತದಾರರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರಿಂದ ಜೆಡಿಎಸ್ ಗೆದ್ದು ಬೀಗಿದೆ. ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಕಣದಲ್ಲಿದ್ದರಿಂದ ಚುನಾವಣೆ ಫಲಿತಾಂಶದಲ್ಲಿ ಕುತುಹೂಲ ಮೂಡಿತ್ತು. ಫಲಿತಾಂಶದ ಬಳಿಕ ಕುತೂಹಲಕ್ಕೆ ತೆರೆ ಬಿದ್ದಿದ್ದು ಬಿ.ಎಲ್.ದೇವರಾಜು ಅವರನ್ನು ಮತದಾರರು ಕೈ ಹಿಡಿಯದಿರುವುದು ಹಿನ್ನಡೆ ಮಾಡಿದೆ.
ಜೆಡಿಎಸ್ ಅಭ್ಯರ್ಥಿಗಳು:
ಸಾಮಾನ್ಯ ವರ್ಗ ಕೆ.ಬಿ.ಮಧು(2532), ಎಸ್.ಎಲ್.ಮೋಹನ್ (2438), ಬಿಸಿಎಂ ಬಿ ವರ್ಗದ ಎಂ.ಮೋಹನ್ (2400), ಸಾಮಾನ್ಯ ಮಹಿಳೆ ಜ್ಯೋತಿ (2465), ಬಿ.ಆರ್.ಲತಾಮಣಿ(2187), ಬಿಸಿಎಂ ಎ ವರ್ಗ ದಿಲೀಪ್‌ಕುಮಾರ್ (2136), ಪರಿಶಿಷ್ಟ ಜಾತಿ ನಾಗರಾಜು( 1937), ಪರಿಶಿಷ್ಟ ಪಂಗಡ ಮಂಜುನಾಥ್ (1934) ಮತಗಳನ್ನು ಪಡೆದು ಬಿ ವರ್ಗದಿಂದ ವಿಜೇತರಾದರು. ಎ ವರ್ಗದ ಶಾಸಕರ ಸಹೋದರ ಎಚ್.ಟಿ.ಲೋಕೇಶ್, ಬಲದೇವ್ (16), ಬಿ.ಎಂ.ಕಿರಣ್ (25) ಮತಗಳನ್ನು ಪಡೆದು ವಿಜೇತರಾದರೆ, ಕುರಬಹಳ್ಳಿ ನಾಗೇಸ್, ಕಾಂತರಾಜು, ಕರಿಶೆಟ್ಟಿ 15 ಮತಗಳನ್ನು ಪಡೆದು ಸೋಲುಂಡರು.
ಕಾಂಗ್ರೆಸ್ ಅಭ್ಯರ್ಥಿಗಳು:
ಸಾಮಾನ್ಯ ವರ್ಗ ಬಿ.ಎಲ್.ದೇವರಾಜು(2336), ಕೆ.ಟಿ.ಗಂಗಾಧರ್ 2112), ಬಿಸಿಎಂ ಬಿ ವರ್ಗ ಕೃಷ್ಣೇಗೌಡ(2229), ಸಾಮಾನ್ಯ ಮಹಿಳೆ ಕೆ.ಎನ್.ಕೋಮಲಾ(1852), ಸುಕನ್ಯಾ(1570), ಪರಿಶಿಷ್ಟ ಜಾತಿ ಚಲುವಯ್ಯ(1619), ಪರಿಶಿಷ್ಟ ಪಂಗಡ ಜಯರಾಮನಾಯಕ(1493), ಬಿಸಿಎಂ ಎ ಶಶಿಧರ್ (1428) ಮತಗಳನ್ನು ಪಡೆದು ಬಿ ವರ್ಗದ ಅಭ್ಯರ್ಥಿಗಳು ಸೋತಿದ್ದಾರೆ.
ಎ ವರ್ಗದ 3 ಕೈ ಅಭ್ಯರ್ಥಿಗಳ ಗೆಲುವು ಮತ್ತು ಸೋಲು: ಎ.ವೈ.ವಿಜಯಕುಮಾರ್, ಎಂ.ಪಿ.ಲೋಕೇಶ್ (16), ಸುರೇಶ್ (17) ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಮಂಜೇಗೌಡ(5), ರಮೇಶ್, ಎಸ್.ಬಿ.ವಿಶ್ವನಾಥ್(15) ಮತಗಳನ್ನು ಪಡೆದು ಸೋಲು ಕಂಡರು.
ಸಂಭ್ರಮಾಚರಣೆ:
ಟಿಎಪಿಸಿಎಂಎಸ್ ಚುನಾವಣೆ ಫಲಿತಾಂಶ ಜೆಡಿಎಸ್ ಪರ ಬರುತ್ತಿದ್ದಂತೆ ಕಾರ್ಯಕರ್ತರು ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಸಂಭ್ರಮಾಚರಣೆ ಆಚರಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.