

ಕೊಳ್ಳೇಗಾಲ: ಸತ್ತೇಗಾಲ ಗ್ರಾಮದಲ್ಲಿ ಅಪೂರ್ಣ ಹಂತದಲ್ಲಿರುವ ವಿದ್ಯುತ್ ಲೈನ್‌ಗೆ ಟಿಸಿ ಚಾರ್ಜ್ ಮಾಡಲು ಮುಂದಾಗಿದ್ದ ಸೆಸ್ಕ್ ಜೆಇ ಹಾಗೂ ಸಿಬ್ಬಂದಿ ಕೆಲಸವನ್ನು ವಿರೋಧಿಸಿ ರೈತನೊಬ್ಬ ಟಿ.ಸಿ ಕಂಬ ಏರಿ ಬುಧವಾರ ಪ್ರತಿಭಟಿಸಿದರು.
ಸೆಸ್ಕ್ ಜೆಇ ಮಹದೇವಸ್ವಾಮಿ ಹಾಗೂ ಲೈನ್‌ಮನ್‌ಗಳು ಪಂಪ್‌ಸೆಟ್ ಜಮೀನಿಗೆ 11 ಕೆವಿ ವಿದ್ಯುತ್ ಸಂಪರ್ಕ ನೀಡಲು ಎಳೆಯಲಾಗಿದ್ದ ವಿದ್ಯುತ್‌ಲೈನ್ ಅಪೂರ್ಣ ಸ್ಥಿತಿಯಲ್ಲಿದ್ದರೂ ಟಿಸಿ ಚಾರ್ಚ್ ಮಾಡಲು ಮುಂದಾಗಿದ್ದಾರೆ ಎಂದು ರೈತ ಶಶಿಕುಮಾರ್ ಟಿಸಿ ಕಂಬ ಏರಿ ಸೆಸ್ಕ್ ಅಧಿಕಾರಿಗಳ ಕಾರ್ಯವನ್ನು ಖಂಡಿಸಿ ಅಕ್ರೋಶ ವ್ಯಕ್ತಪಡಿಸಿದರು.
ಈ ಘಟನಾವಳಿಯನ್ನು ಶಶಿಕುಮಾರ್ ಅವರು ತಾವೇ ಖುದ್ದು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಜೆಇ ಮಹದೇವಸ್ವಾಮಿ ಅವರನ್ನು ವಿದ್ಯುತ್ ಕಂಬಗಳು ಹಾಗೂ ವಿದ್ಯುತ್‌ಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಟಿಸಿ ಚಾರ್ಜ್ ಮಾಡಿ, ಇಲ್ಲವೆ ನಾನು ಮೇಲೆ ಇರುತ್ತೇನೆ. ಹೀಗೆ ಚಾರ್ಜ್ ಮಾಡಿ ಎಂದು ಪಟ್ಟು ಹಿಡಿದಿದ್ದಾನೆ. ನಿಮ್ಮ ಮೇಲಧಿಕಾರಿಗಳಿಗೂ ಈ ಬಗ್ಗೆ ತಿಳಿಸಿದ್ದೇನೆ. ಆಗಿದ್ದರೂ ಚಾರ್ಜ್ ನೀಡಲು ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಜೆಇ ಮಹದೇವಸ್ವಾಮಿ ಅವರು ಸಹ ಕೈಯಲ್ಲಿ ಮೊಬೈಲ್ ಹಿಡಿದು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದೀಯಾ? ನಾವು ಪೊಲೀಸ್ ಸ್ಟೇಷನ್‌ಗೆ ಹೋಗುತ್ತೇನೆ. ಕಂಬದಲ್ಲಿದ್ದ ವಿದ್ಯುತ್ ತಂತಿ ಪಿನ್ ಅನ್ನು ನೀನೇ ಕಳಚಿದ್ದಿಯಾ, ನಿನ್ನ ವಿರುದ್ಧ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದು ಜೆಇ ಮಹದೇವಸ್ವಾಮಿ ಪ್ರತಿಕ್ರಿಯಿಸಿದ್ದು. ಇವರಿಬ್ಬರ ಸಂಭಾಷಣೆಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿವೆ.
ಟಿ.ಸಿ ಅಳವಡಿಕೆ ವಿಚಾರವಾಗಿ ಹಿಂದೆ ಜೆ.ಇ ಮಹದೇವಸ್ವಾಮಿ ಹಣಕ್ಕೆ ಪೀಡಿಸಿದ್ದರು. ಈ ಬಗ್ಗೆ ಸೆಸ್ಕ್ ಎಂ.ಡಿ ಅವರಿಗೂ ಸಹ ದೂರು ನೀಡಿದ್ದೆ. ಅವರು ತನಿಖೆ ಮಾಡುವುದಾಗಿ ತಿಳಿಸಿದ್ದರು. ಅಂದಿನಿಂದಲೂ ನನ್ನ ಕೆಲಸದ ಬಗ್ಗೆ ಸೆಸ್ಕ್ ಎಇಇ ಹಾಗೂ ಜೆಇ ಉದಾಸೀನ ಮಾಡುತ್ತಾರೆ. ಅಪೂರ್ಣ ವಿದ್ಯುತ್ ಲೈನ್ ಕಾಮಗಾರಿಗೆ ಟಿಸಿ ಚಾರ್ಜ್ ಮಾಡಲು ಬಂದಾಗ ತಡೆದು ಪ್ರತಿಭಟಿಸಿದ್ದೇನೆ. ಅಲ್ಲದೆ, ನನ್ನ ಜಮೀನಿನ ತನಕ ಕಂಬ ಅಳವಡಿಸಿಲ್ಲ. ಶಶಿಕುಮಾರ್, ಸತ್ತೇಗಾಲ ಗ್ರಾಮ. ಶಶಿಕುಮಾರ್ ಅಧಿಕಾರಿ ಎಂಬುದನ್ನು ನೋಡದೆ ಏಕವಚನದಲ್ಲಿ ಮಾತನಾಡುತ್ತಾನೆ. ಕೆಲಸ ಪೂರ್ಣಗೊಳಿಸಲು ನಾನು ಹೋಗಿದ್ದೆ. ನಂತರ, ಟಿಸಿ ಚಾರ್ಜ್ ಮಾಡುತ್ತಿದ್ದೆ. ಆದರೆ, ಕೆಲಸ ಮಾಡಲು ಬಿಡಲಿಲ್ಲ. ಈ ವಿಚಾರವಾಗಿ ಸ್ಥಳಕ್ಕೆ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಬಂದಿದ್ದರು. ಆದರೆ, ಶಶಿಕುಮಾರ್ ಬೆಂಗಳೂರಿಗೆ ತೆರಳಿದ್ದೇನೆ ಎಂದು ಹೇಳುತ್ತಿದ್ದಾನೆ. ಈತ ಬಹಳ ತೊಂದರೆ ಕೊಡುತ್ತಿದ್ದಾನೆ. ಮಹದೇವಸ್ವಾಮಿ, ಜೆ.ಇ, ಸತ್ತೇಗಾಲ, ಕೊಳ್ಳೇಗಾಲ ಸೆಸ್ಕ್ ಕಚೇರಿ.