ಟಿ.ತಿಮ್ಮನಹಳ್ಳಿಯಲ್ಲಿ ಶ್ರೀ ತೋಟದಮ್ಮ ಜಾತ್ರೆ

alur 1
ತೋಟದಮ್ಮ ಜಾತ್ರೆ
Published on

ಆಲೂರು: ತಾಲೂಕಿನ ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ತಿಮ್ಮನಹಳ್ಳಿ ಗ್ರಾಮದ ಶ್ರೀ ತೋಟದಮ್ಮ ದೇವತೆ ಜಾತ್ರಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಅರ್ಚಕ ವೆಂಕಟೇಶ್ ಕಶ್ಯಪ್ ಅವರ ನೇತೃತ್ವದಲ್ಲಿ ಗ್ರಾಮದ ಹಿರಿಯ ಮುಖಂಡರ ಜತೆಗೂಡಿ ಗ್ರಾಮದ ಹಿಂಭಾಗವಿರುವ ಕೊಳದಿಂದ ಅಂಜನೇಯ ದೇವಾಲಯದವರೆಗೂ ಆಗಮಿಸಿದ ಕಳಸ ಹೊತ್ತ ಮಹಿಳೆಯರನ್ನು ವಾದ್ಯ ಮೇಳಗಳೊಂದಿಗೆ ಸ್ವಾಗತ ಮಾಡಿಕೊಳ್ಳಲಾಯಿತು.
ಬೆಳಗ್ಗೆ ಶ್ರೀ ತೋಟದಮ್ಮ ದೇವಿಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ನಂತರ ಮಧ್ಯಾಹ್ನ 3 ಗಂಟೆಗೆ ಗ್ರಾಮಸ್ಥರೆಲ್ಲ ಸೇರಿ ತಯಾರಿಸಿದ್ದ ಬಾಡೂಟವನ್ನು ತಾಯಿಗೆ ಎಡೆ ಕೊಡಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಬಡಿಸಲಾಯಿತು.

ಕದಾಳು ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮೇಗೌಡ, ದೇವೇಂದ್ರ, ಶಿವಣ್ಣ, ಲಕ್ಕೇಗೌಡ, ಬಿಜೆಪಿ ಮುಖಂಡ ಆರ್.ಕೆ. ರವಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net