ಟಾಟಾ ಸಂಸ್ಥೆಯಿಂದ ಗಿಡ ನೆಡಲು ಚಾಲನೆ

28Kush04
Published on

ಕುಶಾಲನಗರ: ಕೂಡಿಗೆಯ ಮುರಾರ್ಜಿ ವಸತಿ ಶಾಲೆಯ ಆವರಣದಲ್ಲಿ ಶುಕ್ರವಾರ ಟಾಟಾ ಕಾಫಿ ಲಿಮಿಟೆಡ್ ವತಿಯಿಂದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ವ್ಯವಸ್ಥಾಪಕ ಕಾರ್ತಿಕ್ ಎಲ್ಲಪ್ಪ ಚಾಲನೆ ನೀಡಿದರು.


ನಂತರ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ 1,200 ಗಿಡಗಳನ್ನು ನಮ್ಮ ಸಂಸ್ಥೆಯ ಪರವಾಗಿ ಸುತ್ತಮುತ್ತಲಿನ ಪರಿಸರದಲ್ಲಿ ನೆಡಲಾಗುವುದು. ಪರಿಸರ ಹಸಿರಾಗಿರಬೇಕು ಎಂಬ ಉದ್ದೇಶದಿಂದ ಇಂತಹ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.


ಟಾಟಾ ಸಂಸ್ಥೆಯ ಸಿಬ್ಬಂದಿ ನಾಗೇಶ್, ಉತ್ತಪ್ಪ, ನವೀನ್, ಸುಜನ್, ರಾಹುಲ್, ಶಾಲಾ ಪ್ರಾಂಶುಪಾಲ ಕೆ.ಪ್ರಕಾಶ, ಶಿಕ್ಷಕರಾದ ದಿನೇಶ್ ಆಚಾರಿ, ಮಂಜು, ದೊಡ್ಡಯ್ಯ, ನಾಗೇಂದ್ರ, ಆಸಿಫ್, ಚಿದಂಬರ, ವಾರ್ಡನ್ ಜಗದೀಶ್, ಅಶ್ವಥಿ, ಅರಿಣಾಕ್ಷಿ ಮತ್ತು ತ್ರಿವೇಣಿ ಮತ್ತಿತರರು ಹಾಜರಿದ್ದರು.

ಕೂಡಿಗೆ ಮೊರಾರ್ಜಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ಕಾರ್ತಿಕ್ ಎಲ್ಲಪ್ಪ ಶುಕ್ರವಾರ ಚಾಲನೆ ನೀಡಿದರು. ಕೆ.ಪ್ರಕಾಶ್, ದಿನೇಶ್ ಆಚಾರಿ, ಮಂಜು, ದೊಡ್ಡಯ್ಯ, ನಾಗೇಂದ್ರ, ಆಸಿಫ್, ಚಿದಂಬರ ಜಗದೀಶ್, ಅಶ್ವಥಿ, ಅರಿಣಾಕ್ಷಿ ಮತ್ತು ತ್ರಿವೇಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net