ಟವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ

bkt-28-4
ಬಾಗಲಕೋಟೆಯ ನವನಗರದ ಸೆಕ್ಟರ್ 2 ರಲ್ಲಿ ಸಾರ್ವಜನಿಕರು ಏರಟೆಲ್ ಟವರ ನಿರ್ಮಾಣ ವಿರೋಸಿ ಪ್ರತಿಭಟನೆ ನಡೆಸಿದರು. ಹಣಮಂತ ಘೋರ್ಪಡೆ ಡಾ.ಸುಭಾಸ ಚವ್ಹಾಣ, ರವಿ ಶಹಾಪೂರ, ನಾರಾಯಣ ಗುಡಿ, ರತ್ನಾಕರ ಕಸುಂದೆ, ಸುರೇಶ ಕದಂ, ಮುಸ್ತಾಫ ಬೇಪಾರಿ, ಮಹೆಬೂಬ ಮನಿಯಾರ ಇದ್ದರು.
Published on

ಬಾಗಲಕೋಟೆ: ಜನನಿಬಿಡ ಪ್ರದೇಶದಲ್ಲಿ ಏರಟೆಲ್ ಟವರ ನಿರ್ಮಿಸುವದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ಮಾಡಿದ ಘಟನೆ ನವನಗರದ ಸೆಕ್ಟರ ನಂಬರ 2 ರಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಏರಟೆಲ್ ಟವರ್ ನಿರ್ಮಿಸಬಾರದು. ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತೆವೆ. ಮಕ್ಕಳು ಹಾಗೂ ವೃದ್ದರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಾವು ವಾಸ ಮಾಡುವ ಸ್ಥಳದಲ್ಲಿ ಬೇಡ ಎಂದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ಸ್ಥಳಿಯ ಶಾಸಕರಿಗೆ ಈಗಾಗಲೆ ಮನವಿ ಮಾಡಿಕೊಂಡಿದ್ದು ಶಾಸಕರು ಬೇರೆ ಕಡೆ ವರ್ಗಾವಣೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದರು ಮನೆ ಮಾಲೀಕರು ಒಪ್ಪುತ್ತಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಹಣಮಂತ ಘೋರ್ಪಡೆ ಡಾ.ಸುಭಾಸ ಚವ್ಹಾಣ, ರವಿ ಶಹಾಪೂರ, ನಾರಾಯಣ ಗುಡಿ, ರತ್ನಾಕರ ಕಸುಂದೆ, ಸುರೇಶ ಕದಂ, ಮುಸ್ತಫಾ ಬೇಪಾರಿ, ಮಹೆಬೂಬ ಮನಿಯಾರ, ಪ್ರಮೋದ ಕುಲಕರ್ಣಿ, ಅಶೋಕ ಹಡಪದ, ಯಮನಪ್ಪ ಕೋಲ್ಕಾರ, ಆನಂದ ಕುಲಕರ್ಣಿ ಸೇರಿದಂತೆ ಇತರರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net