ಟಯರ್ ಸ್ಪೋಟಗೊಂಡು ಲಾರಿ ಪಲ್ಟಿ

22 NRD-1
ನರಗುಂದದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಸಕ್ಕರೆ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಬಿದ್ದಿರುವುದು.
Published on

ನರಗುಂದ: ಸಕ್ಕರೆ ಸಾಗಿಸುತ್ತಿದ್ದ ವಾಹನದ ಹಿಂಬದಿ ಟಯರ್ ಸಿಡಿದ ಪರಿಣಾಮ ಲಾರಿ ಪಲ್ಟಿಯಾಗಿ, ಚಾಲಕ ಮತ್ತು ಕ್ಲೀನರ್ ಸಿನಿಮಿಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದ ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.

ಪಟ್ಟಣದ ಕೆಇಬಿ ಗಣೇಶ ದೇವಸ್ಥಾನದ ಬಳಿ ಕೋಲಾರ ಮೂಲದ ಲಾರಿ ಪಲ್ಟಿಯಾಗಿ ಬಿದ್ದಿದೆ. ಮುಧೋಳದಿಂದ ನರಗುಂದ ಮಾರ್ಗವಾಗಿ ಭದ್ರಾವತಿಗೆ ಗೊರಟಿದ್ದ ಲಾರಿಯಲ್ಲಿ 50 ಕೆಜಿ ತೂಕದ 240 (12 ಟನ್) ಸಕ್ಕರೆ ಚೀಲಗಳನ್ನು ಸಾಗಿಸಲಾಗುತ್ತಿತ್ತು. ದೇವಸ್ಥಾನದ ಬಳಿ ಬರುತ್ತಿದ್ದಂತೆಯೇ ಲಾರಿ ಹಿಂದಿನ ಟಯರ್ ಸ್ಪೋಟಗೊಂಡು ಜಾಯಿಂಟ್ ಕಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಕೋಲಾರ ನಗರದ ಚಾಲಕ ಗೈಬು ಉದ್ದಾರ, ಕ್ಲೀನರ್ ಸಂಗಮೇಶ ಪಟ್ಟೇದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net