ಟಿಪ್ಪರ್​ ಚಕ್ರ ಮೈಮೇಲೆ ಹರಿದು ಯುವಕ ಸಾವು

A young man died after the wheel of the tipper ran over him
ವಿನಯ ಶಹಾಪುರ
Published on

ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರದ ಲಕ್ಷಿ$್ಮ ಚಿತ್ರಮಂದಿರದ ಬಳಿ ಹುನಗುಂದ&ತಾಳಿಕೋಟೆ ರಾಜ್ಯ ಹೆದ್ದಾರಿಯಲ್ಲಿ ಹೈವಾ ಟಿಪ್ಪರ್​ ಚಕ್ರ ಮೈಮೇಲೆ ಹರಿದು ಯುವಕ ಭಾನುವಾರ ಸಂಜೆ ಸಾವಿಗೀಡಾಗಿದ್ದಾನೆ.

ಕುಟುಂಬಕ್ಕೆ ಆಧಾರವಾಗಿದ್ದ 19ರ ಯುವಕ ವಿನಯ ತಿಪ್ಪಣ್ಣ ಶಹಾಪುರ ಚಿಕಿತ್ಸೆಗೂ ಮುನ್ನವೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತನಾಗಿದ್ದಾನೆ. ಮಧ್ಯಾಹ್ನವೇ ದುರಂತ ಸಂಭವಿಸಿದ್ದರೂ ಸ್ಥಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ವಿಳಂಬವಾಗಿ ಬಾಗಲಕೋಟೆಯ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರಿ ಆಂಬುಲೆನ್ಸ್​ ಲಭ್ಯವಿಲ್ಲದ ಕಾರಣ ಖಾಸಗಿ ಆಂಬುಲೆನ್ಸ್​ನಲ್ಲಿ ಬಾಗಲಕೋಟೆಯತ್ತ ತೆರಳುತ್ತಿದ್ದಾಗ ಮಾರ್ಗಮಧ್ಯೆ ವಿನಯ ಉಸಿರು ಚಲ್ಲಿದ ಎಂದು ಮೃತನ ಕುಟುಂಬದ ಮೂಲಗಳು ತಿಳಿಸಿವೆ. ಈ ಕುರಿತು ಟಿಪ್ಪರ್​ ಚಾಲಕ& ರೂಢಗಿ ತಾಂಡಾ ನಿವಾಸಿ ಸಂಪತ್​ ಬಸವರಾಜ ಚವ್ಹಾಣ ವಿರುದ್ಧ ಮೃತ ವಿನಯನ ತಾಯಿ ಲಕ್ಷಿ$್ಮ ಶಹಾಪುರ ಪ್ರಕರಣ ದಾಖಲಿಸಿದ್ದಾರೆ. ಮುದ್ದೇಬಿಹಾಳ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಮಾನವೀಯತೆ ಮರೆತ ಜನ: ವಿನಯ ಬೈಕ್​ ಮೇಲೆ ಪಿಲೇಕೆಮ್ಮನಗರ ಬಡಾವಣೆಯಲ್ಲಿರುವ ತನ್ನ ಮನೆಯತ್ತ ತೆರಳುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್​ ಡಿಕ್ಕಿ ಹೊಡೆಯಿತು. ನೆಲಕ್ಕೆ ಬಿದ್ದ ಆತನ ಮೈಮೇಲೆ ಚಕ್ರಗಳು ಹರಿದವು. ಇದರಿಂದ ತೀವ್ರ ರಕ್ತಸ್ರಾವ, ಅಪಾರ ನೋವಿನಿಂದ ವಿನಯ ರಸ್ತೆ ಮೇಲೆಯೇ ಒದ್ದಾಡತೊಡಗಿದ್ದ. ಜನರು ನೋಡಿದರೂ ವಿನಯ ನೆರವಿಗೆ ಬರಲಿಲ್ಲ. ಆದರೆ ಹಲವರು ತಮ್ಮ ಮೊಬೈಲ್​ಗಳಲ್ಲಿ ಅಪಘಾತದ ದೃಶ್ಯ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ತಣವೇ ಅವನನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಆತ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಇತ್ತು. ಇದು ಜನರು ಮಾನವೀಯತೆ ಮರೆತು ನಡೆದುಕೊಳ್ಳುವುದಕ್ಕೆ ಜೀವಂತ ಉದಾಹರಣೆಯಾಗಿದೆ ಎಂದು ಮೃತನ ತಾಯಿ ಲಕ್ಷಿ$್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಕಷ್ಟದಲ್ಲಿ ಕುಟುಂಬ: ಅತ್ಯಂತ ಕಡು ಬಡ ಕುಟುಂಬದ ವಿನಯಗೆ ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ. ೌರಿಕ ವೃತ್ತಿನಿರತ ತಂದೆ ತಿಪ್ಪಣ್ಣ ಕಿಡ್ನಿ ವೈಲ್ಯದಿಂದ ಬಳಲುತ್ತಿದ್ದು ಹಾಸಿಗೆ ಹಿಡಿದಿದ್ದಾರೆ. ತಾಯಿ ಅವರಿವರ ಬಳಿ ಕೆಲಸ ಮಾಡಿ ಪತಿಯ ಆರೈಕೆಯ ಜೊತೆಗೆ ಮನೆ ನಡೆಸುತ್ತಿದ್ದಾರೆ. ವಿನಯನೇ ಮನೆಯ ಹಿರಿಯ ಮಗನಾಗಿದ್ದು ಚಿಕ್ಕಪ್ಪ ಶ್ರೀನಿವಾಸ ಶಹಾಪುರ, ಶಿವು ಶಹಾಪುರ ಜೊತೆಗೆ ೌರಿಕನಾಗಿ ಕೆಲಸ ಮಾಡುತ್ತ ಕುಟುಂಬ ಸಾಕುವ ಹೊಣೆಗಾರಿಗೆ ನಿಭಾಯಿಸುತ್ತಿದ್ದ. ಇದೀಗ ಕುಟುಂಬಕ್ಕೆ ಆಸರೆಯಾಗಿದ್ದ ಮನೆಯ ಹಿರಿಯ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದ್ದು ತೀವ್ರ ಸಂಕಷ್ಟದಲ್ಲಿದೆ. ಇವರ ಕಷ್ಟ ನೋಡಿ ಜನ ಮಮ್ಮಲು ಮರುಗುತ್ತಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ !: ಅಪಘಾತದ ವಿಷಯ ತಿಳಿದು ಕೆ ಪಿಎಸ್​ಐ ಆರ್​.ಎಲ್​.ಮನ್ನಾಭಾಯಿ ಅವರು ಸ್ಥಳಕ್ಕೆ ಬಂದು ವಿನಯನನ್ನು ಸರ್ಕಾರಿ ಆಸ್ಪತ್ರೆಗೆ ಕಳಿಸಲು ಕ್ರಮ ಕೈಗೊಂಡರು. ಒದ್ದಾಡುತ್ತಿದ್ದ ವಿನಯನನ್ನು ಆಸ್ಪತ್ರೆಗೆ ತಂದಾಗ ವೈದ್ಯರೇ ಇರಲಿಲ್ಲ. ಕೆಲ ಸಮಯದ ನಂತರ ನರ್ಸಿಂಗ್​ ಸಿಬ್ಬಂದಿ ಬಂದು ಪ್ರಾಥಮಿಕ ಚಿಕಿತ್ಸೆ ನೀಡಿ ದೊಡ್ಡಾಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಇಷ್ಟೆಲ್ಲ ಆಗುವಷ್ಟರಲ್ಲಿ ಟನೆ ನಡೆದು ಒಂದು ಗಂಟೆಗೂ ಹೆಚ್ಚು ಕಾಲ ಆಗಿತ್ತು. ತಣಕ್ಕೆ ಸರ್ಕಾರಿ ಆಂಬುಲೆನ್ಸ್​ ಸಿಗಲಿಲ್ಲ. ತೀವ್ರವಾಗಿ ಪ್ರಯತ್ನಿಸಿದ ಮೇಲೆ ಖಾಸಗಿ ಅಂಬ್ಯುಲೆನ್ಸ್​ ಲಭ್ಯವಾಯಿತು. ಬಾಗಲಕೋಟೆಗೆ ಕರೆದೊಯ್ಯುವಾಗ ಪರಿಸ್ಥಿತಿ ಸಾಕಷ್ಟು ವಿಷಮಗೊಂಡಿತ್ತು. ನಮ್ಮ ಮನೆಮಗನನ್ನು ಕಳೆದುಕೊಳ್ಳಬೇಕಾಯಿತು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ಲಭ್ಯವಿದ್ದಲ್ಲಿ ವಿನಯ ಬದುಕುಳಿಯುತ್ತಿದ್ದ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿದ್ದರೂ ವೈದ್ಯರ ಕೊರತೆ, ಸೂಕ್ತ ಚಿಕಿತ್ಸೆ ಲಭ್ಯವಿಲ್ಲದಿರುವುದು ನಮ್ಮ ಮಗನನ್ನು ಬಲಿ ತೆಗೆದುಕೊಂಡಿತು ಎಂದು ವಿನಯನ ಚಿಕ್ಕಪ್ಪ ಶಿವಕುಮಾರ ಶಹಾಪುರ, ಶ್ರೀನಿವಾಸ ಶಹಾಪುರ ತಿಳಿಸಿದ್ದಾರೆ.

ನಿಯಂತ್ರಣದಲ್ಲಿಲ್ಲದ ಸಂಚಾರ ವ್ಯವಸ್ಥೆ: ಬಸವೇಶ್ವರ ವೃತ್ತದಲ್ಲಿ, ವೃತ್ತದಿಂದ ಹೊರಹೋಗುವ ನಾಲ್ಕೂ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಅನ್ನೋದೆ ಸರಿಯಾಗಿ ಇಲ್ಲ. ಬೇಕಾಬಿಟ್ಟಿ ಬಿಡಾಡಿ ದನಗಳು, ಬೀದಿ ನಾಯಿಗಳು ಸಂಚರಿಸುತ್ತವೆ. ವೃತ್ತದ ಹತ್ತಿರದ ಹೊಟೇಲ್​ ಮುಂದೆ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಗುಂಪಾಗಿ ನಿಂತು ಸಂಚಾರ ಸಮಸ್ಯೆ ಬಿಗಡಾಯಿಸಲು ಕಾರಣರಾಗುತ್ತಿದ್ದಾರೆ. ರಸ್ತೆ ಪಕ್ಕದಲ್ಲೇ ಗೂಡಂಗಡಿ, ಡಬ್ಬಾ ಅಂಗಡಿ, ತಳ್ಳು ಗಾಡಿಯಲ್ಲಿ ವ್ಯಾಪಾರಕ್ಕಾಗಿ ಜನ ಮುಗಿಬಿದ್ದಿರುತ್ತಾರೆ. ಬೈಕ್​, ಆಟೋ, ಇನ್ನಿತರ ವಾಹನಗಳು ರಸ್ತೆ ಮೇಲೆಯೇ ನಿಂತಿರುತ್ತವೆ. ಇವೆಲ್ಲವೂ ಅಪಘಾತ ಹೆಚ್ಚಲು ಕಾರಣವಾಗಿವೆ. ಇವೆಲ್ಲ ಅವ್ಯವಸ್ಥೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾದ ಪುರಸಭೆ, ಪೊಲೀಸ್​ ಇಲಾಖೆ ರ್ನಿಲಕ್ಷ ಎದ್ದು ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net