

ರಾಯಬಾಗ: ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ನಡೆಸಿದ ಲಾಠಿಜಾರ್ಜ್ ಖಂಡಿಸಿ ಗುರುವಾರ ಪಟ್ಟಣದ ಝೆಂಡಾಕಟ್ಟಿ ಬಳಿ ರಸ್ತೆ ತಡೆ ನಡೆಸಿ ಪೊಲೀಸ್ ಅಧಿಕಾರಿಯನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಗ್ರೇಡ್2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಕೀಲರಾದ ಬಸವರಾಜ ಈಟಿ ಮಾತನಾಡಿ, ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತತ್ವದಲ್ಲಿ 2ಎ ಮೀಸಲಾತಿ ಹೋರಾಟವನ್ನು ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು ಲಾಠಿಚಾರ್ಜ್ ನಡೆಸಿದ್ದಾರೆ ಎಂದು ಆರೋಪಿಸಿದರು.
ಪಪಂ.ಅಧ್ಯಕ್ಷ ಅಶೋಕ ಅಂಗಡಿ ಮಾತನಾಡಿದರು. ಸಂಗಣ್ಣ ದತ್ತವಾಡೆ, ಮಹೇಶ ತವಸಿ, ಆನಂದ ಡಬ್ಬಣ್ಣವರ, ಬಿ.ಎಸ್.ಪಾಟೀಲ, ದೀಪಕ ಪಾಟೀಲ ಇತರರಿದ್ದರು.