

ಚಿತ್ರದುರ್ಗ: ಜಿಲ್ಲಾಡಳಿತ,ಜಿಪಂ,ರಾಷ್ಟ್ರೀಯ ಆರೋಗ್ಯ ಅಭಿಯಾನ,ಆರೋಗ್ಯಇಲಾಖೆ,ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾ ಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿಗಳ ಆಶ್ರಯದಲ್ಲಿ ರಾಷ್ಟ್ರೀಯ ಡೆಂೆ ದಿನದ ಅಂಗವಾಗಿ ನಗರದ ಕೆಳಗೋಟೆಯ ಲ್ಲಿ ಬುಧವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಡಿಎಚ್‌ಒ ಡಾ.ಆರ್.ರಂಗನಾಥ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು,ಡೆಂೆ ದಿನ-ಎಲ್ಲರ ಸಹಭಾಗಿತ್ವದೊಂದಿಗೆ ಡೆಂೆಯನ್ನು ಸೋಲಿಸೋಣ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ. ಮಳೆಗಾಲ ಆರಂಭವಾಗುತ್ತಿರುವುದರಿಂದಾಗಿ ಸೊಳ್ಳೆಗಳೂ ಹೆಚ್ಚಾಗುತ್ತಿದ್ದು,ನೀರು ಶೇಖರಣೆ ಪರಿಕರಗಳು ಹಾ ಗೂ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸ ಬೇಕು.
ಘನತ್ಯಾಜ್ಯವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡ ಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಪರದೆ,ಬತ್ತಿ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸ ಬೇಕು. ಜ್ವರ ಕಾಣಿಸಿದ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯ ಬೇಕೆಂದು ಸಲಹೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶೀ ಮಾತನಾಡಿ,ಡೆಂೆ ಒಂದು ವೈರಸ್ ಕಾಯಿಲೆಯಾ ಗಿದ್ದು,ಸೊಳ್ಳೆಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೃತಕ ನೀರು ಶೇಖರಣಾ ಪರಿಕರಗಳನ್ನು ವಾರಕ್ಕೆ 2 ಬಾರಿ ಖಾಲಿ ಮಾಡಿ ನೀರು ತುಂಬಿಸಿ,ಮುಚ್ಚಳದಿಂದ ಮುಚ್ಚುವುದು.
ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿ, ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಪಡೆಯಬೇಕು. ಜ್ವರಕ್ಕೆ ತುತ್ತಾದವರು ದ್ರವರೂಪದ ಆಹಾರ ಪದಾರ್ಥ ಸೇವನೆಯೊಂದಿಗೆ ವಿಶ್ರಾಂತಿ ಪಡೆಯ ಬೇಕೆಂದರು.
ಕೆಳಗೋಟೆಯಿಂದ ಆರಂಭವಾದ ಜಾಥಾ ಏಕಲವ್ಯ ವೃತ್ತ,ಭುವನೇಶ್ವರಿ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದ ಮೂಲಕ ಚನ್ನಕೇಶ ವ ದೇವಸ್ಥಾನದವರೆಗೆ ಜಾಥಾ ನಡೆಯಿತು. ನರ್ಸಿಂಗ್‌ವಿದ್ಯಾರ್ಥಿಗಳು,ಆಶಾ ಕಾರ್ಯಕರ್ತೆಯರು,ಪ್ರಾಥಮಿಕ ಆರೋಗ್ಯ ಸುರಕ್ಷಿತಾಧಿ ಕಾರಿಗಳು ಡೆಂೆ ನಿಯಂತ್ರಣದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ನಾಗರಿಕರಿಗೆ ಕರಪತ್ರ ಹಂಚಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ,ಹಿರಿಯ ಆರೋಗ್ಯ ಮೇಲ್ವಿಚಾರಕ ಎಂ.ಬಿ.ಹನುಮಂತಪ್ಪ,ಹಿರಿಯ ಆ ರೋಗ್ಯ ನಿರೀಕ್ಷಣಾಧಿಕಾರಿ ವಿ.ಶ್ರೀನಿ ವಾಸ್,ಬಿ.ಆರ್.ನಾಗರಾಜ್,ಗುರುಮೂರ್ತಿ,ಎಚ್.ಎ.ನಾಗರಾಜ್, ಬಿ.ಆರ್.ಪಾಂಡು, ರುದ್ರಮುನಿ,ಸಿರೀಶ್ ಮತ್ತಿತರರು ಇದ್ದರು.