

ತಾಳಿಕೋಟೆ: ಪಟಣದ ಖಾಸ್ಗತೇಶ್ವರ ಸಭಾ ಭವನ ಬಳಿಗೆ ಸಿದ್ಧಾರೂಢರ ಜನ್ಮಸ್ಥಳ ಚಳಕಾಪುರದಿಂದ ಆಗಮಿಸಿದ ಆರೂಢ ಜ್ಯೋತಿಯಾತ್ರೆಗೆ ಶನಿವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಜ್ಯೋತಿಯಾತ್ರೆಯು ಬಸವೇಶ್ವರ ವೃತ್ತ, ಮಹಾರಾಣಾ ಪ್ರತಾಪ ವೃತ್ತ, ಶಿವಾಜಿ ಮಹಾರಾಜರ ವೃತ್ತ್ತ, ವಿಠ್ಠಲ ಮಂದಿರ ರಸ್ತೆ ಮೂಲಕ ಕತ್ರಿ ಭಜಾರ ಮಾರ್ಗವಾಗಿ ಖಾಸ್ಗತೇಶ್ವರ ಮಠಕ್ಕೆ ತಲುಪಿತು.
ಪಿಬಿ ಹುಣಶ್ಯಾಳ, ಬಸವನ ಬಾಗೇವಾಡಿ, ಆಲಮಟ್ಟಿ, ಕೂಡಲಸಂಗಮ, ಅಮೀನಗಡ, ಪಟ್ಟದಕಲ್ಲು, ಐಹೊಳೆ, ಚಂದಾರ, ರೋಣ, ಯಲ್ಲಾಪುರ, ಶಲವಡಗಿ, ನವಲಗುಂದ, ಅಣ್ಣಿಗೇರಿ, ಹುಲಕೋಟಿ, ಗದಗ ತೋಂಟದಾರ್ಯಮಠಕ್ಕೆ ಭೇಟಿ ನೀಡಿ ಬಳಿಕ ಹುಬ್ಬಳ್ಳಿಗೆ ಯಾತ್ರೆ ತೆರಳಲಿದೆ ಎಂದು ಜ್ಯೋತಿ ರಥಯಾತ್ರೆ ನೇತೃತ್ವ ವಹಿಸಿರುವ ಶಂಕರಗೌಡ ಸಂಗೊಂದಿ ಮಾಹಿತಿ ನೀಡಿದರು.
ಪ್ರಮುಖರಾದ ಶಿವಮೂರ್ತಿ ಶಿವಶಿಂಪಿ, ಈರಣ್ಣ ಪಾಳೆದ, ಗದಗೆಪ್ಪಗೌಡ ಭಾವಿಕಟ್ಟಿ, ರಾಜಣ್ಣ ಬೋರಟ್ಟಿ, ಪ್ರವಿಣ ಬಸವಣ್ಣವರ, ಬಸವರಾಜ ಮಾದಳ್ಳಿ, ಮಲ್ಲು ಗೋಗಿ, ಜಿ.ಟಿ. ೂರ್ಪಡೆ ಪಾಲ್ಗೊಂಡಿದ್ದರು.