ಜ್ಯೋತಿ ರಾಘವೇಂದ್ರ ಹರೀಶಿ ಗ್ರಾಪಂ ನೂತನ ಉಪಾಧ್ಯಕ್ಷೆ

SORRRRR
Published on

ಸೊರಬ: ತಾಲೂಕಿನ ಹರೀಶಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಜ್ಯೋತಿ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾದರು. ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. 15 ಸದಸ್ಯ ಬಲವುಳ್ಳ ಪಂಚಾಯಿತಿಯಲ್ಲಿ ಜ್ಯೋತಿ ರಾಘವೇಂದ್ರ ಹೊರತಾಗಿ ಬೇರಾರು ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಚುನಾವಣಾಧಿಕಾರಿ ವಿ.ಯಶೋದರ ಅವಿರೋಧ ಆಯ್ಕೆ ಪ್ರಕಟಿಸಿದರು. ಗ್ರಾಪಂ ಅಧ್ಯಕ್ಷ ವಜ್ರಕುಮಾರ್, ಸದಸ್ಯರಾದ ಬಿ.ಕೃಷ್ಣಪ್ಪ, ಮಹೇಶ್, ಆರ್.ಉಮಾ, ಜಯಲಕ್ಷ್ಮೀ, ಸರೋಜಾ, ಪಿ.ಕೃಷ್ಣ, ಸಾಕ್ಷಿ ಸಂಪತ್‌ಕುಮಾರ್, ಬಿ.ಪೃಥ್ವಿ, ಪಿಡಿಒ ಎಸ್.ಎಲ್.ಸಂತೋಷ್ ಇದ್ದರು. ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net