

ಧಾರವಾಡ: ಮೇದಾರ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಶ್ರೀಗುರು ಮೇದಾರ ಕೇತೇಶ್ವರ ಜ್ಯೋತಿ ಯಾತ್ರೆ ಭಾನುವಾರ ನಗರಕ್ಕೆ ಆಗಮಿಸಿದ್ದು, ಸಮಾಜ ಬಾಂಧವರು ಭವ್ಯ ಸ್ವಾಗತ ಕೋರಿ ಮೆರವಣಿಗೆ ಮೂಲಕ ಮುರುಘಾಮಠ ಆವರಣಕ್ಕೆ ಕರೆದೊಯ್ದರು.
ಕಲಾಭವನ ಆವರಣದಿಂದ ಪ್ರಾರಂಭವಾದ ಮೆರವಣಿಗೆ ಅಂಜುಮನ್ ವೃತ್ತ, ವಿವೇಕಾನಂದ ವೃತ್ತ, ಭೂಸಪ್ಪ ಚೌಕ್, ಕೆಸಿಸಿ ಬ್ಯಾಂಕ್, ಸುಭಾಷ ರಸ್ತೆ, ರೀಗಲ್ ವೃತ್ತ, ಶಿವಾಜಿ ವೃತ್ತ, ಹಾವೇರಿಪೇಟ ಮೇದಾರ ಓಣಿ ಮಾರ್ಗವಾಗಿ ಮುರುಘಾಮಠಕ್ಕೆ ತಲುಪಿತು.
ಕುಂಭ ಹೊತ್ತ ಮಹಿಳೆಯರು, ಜಗ್ಗಲಗಿ, ಡೊಳ್ಳು ಕುಣಿತ, ಜನಾಂಗದವರು ತಯಾರಿಸಿದ್ದ ಬಿದಿರಿನ ವಸ್ತುಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಚಿತ್ರದುರ್ಗ ಸೀಬಾರ ಮೇದಾರ ಗುರು ಪೀಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಸಾರೋಟ್ನಲ್ಲಿ ಸಾಗಿದರು.
ನಂತರ ಮುರುಘಾಮಠದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ಮೇದಾರ ಸಮಾಜದ ತಾಲೂಕು ಸಮಾವೇಶ ನಡೆಸಲಾಯಿತು. ಸಮಾಜದ ಮುಖಂಡರಾದ ಬಸವರಾಜ ದೊಡವಾಡ, ಗಣೇಶ ಬುಡಪ್ಪನವರ, ಬಸವರಾಜ ಕಿತ್ತೂರ, ಸಿ. ಲಕ್ಷ್ಮಣ ದೊಡ್ಡಮನಿ, ಚಂದ್ರು ಹೆಬ್ಬಳ್ಳಿ, ರಮೇಶ ಹೆಬ್ಬಳ್ಳಿ, ಹರ್ಷ ದೊಡವಾಡ, ವಿಜಯ ಮುಧೋಳ, ಬಸವರಾಜ ಸವಣೂರ, ಮೋಹನ್ ಹೆಬ್ಬಳ್ಳಿ, ರಮೇಶ ಮಡ್ಡಿ, ಚಿದಂಬರ ಕಲಾಲ, ರವಿ ಅರಳಿಕಟ್ಟಿ, ಇತರರು ಇದ್ದರು.
EndFragment