

ಕಡೂರು: ಜ್ಯೇಷ್ಠತೆ ಅಧಾರ ಮೇಲೆ ಅಕ್ರಮ-ಸಕ್ರಮ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕಾಗಿ 2018-19ನೇ ಸಾಲಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತಿದೆ ಎಂದು ಮೆಸ್ಕಾಂ ಉಪವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರ ಎಚ್.ಲಿಂಗರಾಜು ತಿಳಿಸಿದರು.
ಮೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ ಬುಧವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿಕೊಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಹಳೆಯ ಮಾರ್ಗಗಳನ್ನು ಬದಲಾಯಿಸಿ ಕೊಡಲಾಗುತ್ತದೆ. ಅನಧಿಕೃತವಾಗಿ ಅಳವಡಿಸಿಕೊಂಡಿರುವ ಐಪಿ ಸೆಟ್‌ಗಳಿಂದ ವೋಲ್ಟೇಜ್ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಪರಿವರ್ತಕಗಳು ವಿಲಗೊಳ್ಳುತ್ತಿವೆ. ಅನಧಿಕೃತ ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿಕೊಂಡರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ವೈ.ಮಲ್ಲಾಪುರ ಗ್ರಾಮದ ಮಹೇಶ್ ಮಾತನಾಡಿ, ನಿರಂತರ ವಿದ್ಯುತ್ ಸರಬರಾಜು ಸಮರ್ಪಕವಾಗಿ ನೀಡುತ್ತಿಲ್ಲ. ಲೈನ್‌ಮ್ಯಾನ್‌ಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸರಿಯಾಗಿ ವಿದ್ಯುತ್ ಸರಬರಾಜು ಆಗದಿರುವುದರಿಂದ ಬೆಳೆಗಳು ನಾಶವಾಗುತ್ತಿವೆ. ನಿರಂತರ ಜ್ಯೋತಿ ವಿದ್ಯುತ್ ಸರಬರಾಜಿನಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕಿದೆ. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಕಂಬಗಳ ಅಂತರ 300 ಮೀಟರ್‌ಗಿಂತ ಜಾಸ್ತಿ ಇದ್ದು, ತಂತಿಗಳು ಜೋತುಬಿದ್ದಿವೆ. ಇದರಿಂದ ವಾಹನಗಳ ಸಂಚಾರದಲ್ಲಿ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇದ್ದು, ಕೂಡಲೇ ಮಧ್ಯಂತರ ಕಂಬಗಳನ್ನು ಅಳವಡಿಸಬೇಕಿದೆ ಎಂದು ಒತ್ತಾಯಿಸಿದರು.
ಕರೇಕಲ್ಲಹಳ್ಳಿ ಗ್ರಾಮದಿಂದ ಎಂಆರ್‌ಟಿ ತೋಟದವರೆಗೆ ಎ್-7 ಸಿಂಗಟಗೆರೆ ವಿದ್ಯುತ್ ಮಾರ್ಗ ಹಾದುಹೋಗಿದ್ದು, ಇದರಿಂದ ತೆಂಗು ಮತ್ತು ಅಡಕೆ ಮರಗಳಿಗೆ ತೊಂದರೆಯಾಗುತ್ತಿದೆ. ಈ ಮಾರ್ಗವನ್ನು ಸ್ಥಳಾಂತರಿಸಿಕೊಡುವಂತೆ ವೈ.ಮಲ್ಲಾಪುರ ಗ್ರಾಮದ ಮಧು ಮನವಿ ಮಾಡಿದರೆ, ಪ್ರತಿ ಗ್ರಾಪಂಗೆ ಇಬ್ಬರು ಪವರ್ ಮ್ಯಾನ್‌ಗಳನ್ನು ನಿಯೋಜಿಸಿಕೊಡುವಂತೆ ಕಂಸಾಗರ ಶೇಖರಪ್ಪ ಕೋರಿದರು.
ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮಂಜುನಾಥ್, ಎಇಇ ಎಚ್.ತಿರುಪತಿನಾಯ್ಕ, ಸಹಾಯಕ ತಾಂತ್ರಿಕ ಶಾಖೆಯ ಇಂಜಿನಿಯರ್ ಸಿ.ಎಂ.ಪ್ರಸನ್ನ, ಸಹಾಯಕ ಲೆಕ್ಕಾಧಿಕಾರಿ ಡಿ.ಎಸ್.ಲೋಹಿತ್‌ಕುಮಾರ್, ಅಭಿಯಂತರರಾದ ಎಚ್.ಎಸ್.ಶಿವಕುಮಾರ್, ಆರ್. ಶಿವಕುಮಾರ್, ಎಚ್.ಚಂದ್ರಪ್ಪ, ಎನ್.ವೀರೇಶ್, ಆರ್.ಎಸ್.ಬಸವರಾಜ್ ಹಾಗೂ ಸಹಾಯಕಿ ಸಿಬ್ಬಂದಿ ಭಾಗ್ಯಾ ಇತರರಿದ್ದರು.