ಜ್ಞಾನೇಶ್ವರ ಮಠದಲ್ಲಿ ವಿವಿಧತೆಯಲ್ಲಿ ಏಕತೆ

Unity in diversity at Dnyaneshwar Math
Unity in diversity at Dnyaneshwar Math
Published on

ಲೋಕಾಪುರ: ಭರತ ಖಂಡ ಹಲವು ಧರ್ಮ, ಜಾತಿ, ಸಂಸ್ಕೃತಿಗಳ ಸಂಗಮ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಕುಮಾರ ಸರನಾಯಕ ಹೇಳಿದರು.

ಪಟ್ಟಣದ ಜ್ಞಾನೇಶ್ವರ ಮಠದಲ್ಲಿ ಕೀರ್ತಿ ಶೇಷರಾದ ಚತುರ್ಥ ಭುಜಂಗ ಮಹಾಸ್ವಾಮಿಗಳ 25ನೇ ವರ್ಷದ ರಜತ ಮಹೋತ್ಸವ, ಪುಸ್ತಕ ಬಿಡುಗಡೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದ ಜ್ಞಾನೇಶ್ವರ ಮಠದಲ್ಲಿ ವಿವಿಧತೆಯಲ್ಲಿ ಏಕತೆ ಕಾಣಬಹುದು ಎಂದರು.

ನಿವೃತ್ತ ಪ್ರಾಚಾರ್ಯ ವಿ.ಬಿ. ಮಾಳಿ ಮಾತನಾಡಿ, ಚತುರ್ಥ ಭುಜಂಗ ಸ್ವಾಮಿಗಳು ಸರಳವಾಗಿ ಜೀವಿಸಿದವರು. ಅವರು ಎಂದೂ ಯಾವುದನ್ನೂ ಆಪೇಕ್ಷೆ ಪಟ್ಟವರಲ್ಲ. ಖುಷಿ ಸದೃಶ್ಯ ಜೀವನ ಅವರದು. ಜನ ಸಾಮಾನ್ಯರ ಮಧ್ಯೆ ಅವರಂತೆ ಇರುತ್ತಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಗುರುರಾಜ ಜೋಶಿ, ಗಣಿ ಉದ್ಯಮಿದಾರ ಎಂ.ಎಂ. ವಿರಕ್ತಮಠ, ಜಯರಾಮ ತಳಘಟ್ಟಿ ಮಾತನಾಡಿದರು.

ಬ್ರಹ್ಮಾನಂದ ಮಹಾಸ್ವಾಮಿಗಳು, ಆನಂದವನ ಅಗಡಿಯ ಗುರುದತ್ತಮೂರ್ತಿ ಚಕ್ರವರ್ತಿ ಮಹಾಸ್ವಾಮಿಗಳು, ತೊಂಡಿಕಟ್ಟಿ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಮಹಾರಾಜರು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಆನಂದ ಪೂಜಾರ, ಲೋಕಾಪುರ ವಲಯ ಅಧ್ಯಕ್ಷ ಎಸ್.ಎಂ. ರಾಮದುರ್ಗ ಇದ್ದರು.

25 ಪೌರ ಕಾರ್ಮಿಕರಿಗೆ ಸನ್ಮಾನ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸಂಗೀತ ಸೇವೆ ಕೃಷ್ಣಾ ರಂಗಣ್ಣವರ ನಡೆಸಿಕೊಟ್ಟರು. ಕೆ.ಪಿ.ಯಾದವಾಡ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net