ಜ್ಞಾನಾರ್ಜನೆಗೆ ಗ್ರಂಥಾಲಯ ಪೂರಕ

5
Published on

ಇಟಗಿ: ಸಮೀಪದ ಬೈಲೂರು ಗ್ರಾಮದ ಡಿಜಿಟಲ್​ ಗ್ರಂಥಾಲಯದಲ್ಲಿ ಭಾನುವಾರ ಅರಿವು ಕೇಂದ್ರದ ಲಾಂಛನ ಅನಾವರಣ ಹಾಗೂ ಗ್ರಂಥಾಲಯ ಪಿತಾಮಹ ಡಾ.ಎಸ್​.ಆರ್​.ರಂಗನಾಥನ್​ ಜನ್ಮದಿನ ನಿಮಿತ್ತ ಗ್ರಂಥಪಾಲಕರ ದಿನ ಜರುಗಿತು.

ಗ್ರಾಪಂ ಅಧ್ಯ ಬಸವರಾಜ ಲದ್ದಿಮಠ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯ ಸದ್ಬಳಕೆ ಮಾಡಿಕೊಂಡು ಉನ್ನತ ಗುರಿ ಸಾಧಿಸಬೇಕು ಎಂದು ಹೇಳಿದರು. ಶಿಕ ಗಂಗಾಧರ ಹನುಮಸಾಗರ ಮಾತನಾಡಿದರು. ದುಂಡಪ್ಪ ಕ್ಯಾಸಗೇರಿ, ಗ್ರಾಪಂ ಸದಸ್ಯ ಸಂಗಮೇಶ ಹಿರೇಮಠ, ನಾಗೇಶ ಬೆಣ್ಣಿ ಮಾತನಾಡಿದರು. ಗ್ರಂಥಪಾಲಕ ಜಗದೀಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ರಾಚಯ್ಯ ಕೆಂಜಡಿಮಠ, ಶಶಿಧರ ಗಂಡಲಾಟಿ, ಸಂಜೀವ ನಂದಿಹಳ್ಳಿ, ಶಿವಾನಂದ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net