

ಸೋಮವಾರಪೇಟೆ: ಶಿಕ್ಷಕರ ಮಾರ್ಗದರ್ಶನದಲ್ಲಿ ಜ್ಞಾನಾರ್ಜನೆ ಮಾಡಿದರೆ ಜೀವನದಲ್ಲಿ ಗುರಿ ತಲುಪಲು ಸಾಧ್ಯ ಎಂದು ಬ್ಯಾಂಕ್ ಆಫ್ ಬರೋಡಾದ ಶಾಖಾ ವ್ಯವಸ್ಥಾಪಕ ಸೀಲಂ ಸ್ವರೂಪ್ ಹೇಳಿದರು.
ಶಾಂತಳ್ಳಿಯ ಕುಮಾರ ಲಿಂಗೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ಮಂಗಳವಾರ ಬ್ಯಾಂಕಿನ 116ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ಇಷ್ಟಪಟ್ಟು ಅಭ್ಯಾಸ ಮಾಡಿದವರು ಮಾತ್ರ ಉನ್ನತ ಹುದ್ದೆ ಗಳಿಸಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಕೆ.ಕೆ. ಗೋಪಾಲ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು
ನಾಡನ್ನು ಸಮರ್ಥವಾಗಿ ಮುನ್ನಡೆಸುವ ಮುಖಂಡರಾಗಬೇಕು ಎಂದರು. ಬ್ಯಾಂಕ್ ವ್ಯವಸ್ಥಾಪಕ ಸೀಲಂ ಸ್ವರೂಪ್ ಅವರು ಶಾಲೆಗೆ ಕುಕ್ಕರ್ ಹಾಗು ಅಡುಗೆ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ಮುಖ್ಯ ಶಿಕ್ಷಕಿ ಉಷಾಕುಮಾರಿ ಇತರರು ಇದ್ದರು.