ಜ್ಞಾನಸಾಗರ ಶಾಲೆಯ ಆರಂಭದಿಂದ ಶಿಕ್ಷಣ ಕ್ರಾಂತಿ

17 crp-1 A
Published on

ಚನ್ನರಾಯಪಟ್ಟಣ: ಸತತ 10 ವರ್ಷಗಳು ನಿರಂತರವಾಗಿ ಶೇ.100ರಷ್ಟು ಫಲಿತಾಂಶ ದಾಖಲಿಸಿ, ಮೈಸೂರು ವಲಯದಲೆ ಈ ಸಾಧನೆ ಮಾಡಿದ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಹೊಂದಿದ ಕೀರ್ತಿ ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್ ನ್ಯಾಷನಲ್ ಸ್ಕೂಲ್‌ನದ್ದಾಗಿದೆ ಎಂದು ನಾಗೇಶ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ನಾಗೇಶ್ ತಿಳಿಸಿದರು.


ಚನ್ನರಾಯಪಟ್ಟಣದಲ್ಲಿನ ಜ್ಞಾನಸಾಗರ ಇಂಟರ್ ನ್ಯಾಷನಲ್ ಸ್ಕೂಲ್‌ವತಿಯಿಂದ 2023-24ನೇ ಸಾಲಿನಲ್ಲಿ ದಾಖಲಾದ ಪ್ರೀನರ್ಸರಿ ಮಕ್ಕಳಿಗಾಗಿ ಶಾಲೆಯ ಅಬ್ದುಲ್‌ಕಲಾಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಕ್ಷರಾಭ್ಯಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣೀಕ ಹಿತದೃಷ್ಟಿಯಿಂದ 17ವರ್ಷಗಳ ಹಿಂದೆ ಪ್ರಾರಂಭಿಸಿದ ಜ್ಞಾನಸಾಗರ ಶಾಲೆಯೂ ಪ್ರತಿವರ್ಷ ದಾಖಾಲಿಸುವ ಫಲಿತಾಂಶದಲ್ಲಿ ಏರುಗತಿಯನ್ನು ಸಾಧಿಸುತ್ತಾ ಸಾಗಿದೆ. ಮೈಸೂರು ವಲಯಮಟ್ಟದಲ್ಲೇ ಉತ್ತಮ ಸಾಧನೆ ಮಾಡಿದ ಏಕೈಕ ಶಾಲೆ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ ಎಂದರು.


ಶಿಕ್ಷಣ ಕೇವಲ ಅಂಕಗಳಿಗಷ್ಟೆ ಸೀಮಿತವಲ್ಲ, ಶೇ.80, 90 ರಷ್ಟು ಅಂಕಗಳಿಸಿದರೇ ಸಾಕು ಎನ್ನುವ ಮನಸ್ಥಿತಿ ತೊಡಗಿಸಿ, ಶಿಕ್ಷಣದ ಜತೆಗೆ ನೈತಿಕ ಶಿಕ್ಷಣ, ಪಠ್ಯೇತರ ಶಿಕ್ಷಣ, ನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಒಳಗೊಂಡ ಶಿಕ್ಷಣ ನೀಡಲಾಗುತ್ತಿದೆ. ಪ್ರತಿವರ್ಷ ನಾಡಿನ ಹೆಸರಾಂತ ಸಾಧಕರಿಂದ ಮಕ್ಕಳ ಸನ್ಮಾರ್ಗದ ಕುರಿತಾಗಿ ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.


ಅಕ್ಷರಾಭ್ಯಾಸದ ಸಲುವಾಗಿ ಶಾರದಾ ಪೂಜೆ ನೆರವೇರಿಸಿ, ತರುವಾಯ ಪಾಲಕರು ತಮ್ಮ ಮಕ್ಕಳ ಕೈಯಿಂದ ತಟ್ಟೆಯಲ್ಲಿ ತುಂಬಿದ ಅಕ್ಷತೆ ಕಾಳಿನಲ್ಲಿ ಅ ಆ ಅಕ್ಷರ ಬರೆಯುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು.

ಸಂಸ್ಥೆಯ ಆಡಳಿತ ಕಾರ್ಯದರ್ಶಿ ಡಾ.ಭಾರತಿನಾಗೇಶ್, ಡೀನ್ ಡಾ.ಸುಜಾಫಿಲೀಪ್ ಹಾಗೂ ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net