ಜ್ಞಾನವಿಕಾಸಕ್ಕೆ ಗ್ರಂಥಾಲಯಗಳು ದಾರಿದೀಪ

13 SARAG 2
ಸರಗೂರು ಪಟ್ಟಣದ ಗ್ರಂಥಾಲಯದಲ್ಲಿ ಡಾ.ಎಸ್.ಆರ್.ರಂಗನಾಥ್ ಅವರ ಜನ್ಮ ಹಾಗೂ ಗ್ರಂಥಾಲಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚೆಲುವರಾಜು, ಮೇಲ್ವಿಚಾರಕರಾದ ಮೂರ್ತಿ, ಮುತ್ತು, ಶಶಿಕಲಾ, ಕೃಷ್ಣೇಗೌಡ, ಸುರೇಶ್, ಕೃಷ್ಣಯ್ಯ ಇದ್ದರು.
Published on

ಸರಗೂರು: ಜ್ಞಾನವಿಕಾಸಕ್ಕೆ ಗ್ರಂಥಾಲಯಗಳು ಉತ್ತಮ ಕೇಂದ್ರಗಳಾಗಿದ್ದು, ಇದಕ್ಕೆ ಕಾರಣಕರ್ತರಾದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರು ಕಂಡ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಗ್ರಂಥಾಲಯ ಮೇಲ್ವಿಚಾರಕರ ಮೇಲಿದೆ ಎಂದು ಗ್ರಂಥಪಾಲಕ ಬಿಡಗಲು ಶಿವಣ್ಣ ಹೇಳಿದರು.

ಪಟ್ಟಣ ಸಾರ್ವಜನಿಕರ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಎಸ್.ಅರ್.ರಂಗನಾಥನ್ ಅವರ ಜನ್ಮದಿನ ಹಾಗೂ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಂಥಾಲಯಗಳ ಬಗ್ಗೆ ಜನಸಾಮಾನ್ಯರಿಗೆ ಅರಿವೇ ಇಲ್ಲದ ಕಾಲದಲ್ಲಿ ಡಾ ಎಸ್.ಆರ್.ರಂಗನಾಥನ್ ಅವರು ಜನಸಾಮಾನ್ಯರ ಜ್ಞಾನವನ್ನು ಹೆಚ್ಚಿಸಲು ಗ್ರಂಥಾಲಯಗಳ ಆಧುನೀಕರಣ ಸೇರಿದಂತೆ ಸಮಗ್ರ ಬದಲಾವಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಗ್ರಂಥಾಲಯಗಳ ಪುನಶ್ಚೇತನಕ್ಕಾಗಿ ದುಡಿದರು. ಗ್ರಂಥಾಲಯ ಜ್ಞಾನದ ಪಂಚ ಸೂತ್ರಗಳನ್ನು ಜಾರಿಗೆ ತಂದು ಅವುಗಳನ್ನು ಗ್ರಂಥಾಲಯಗಳಲ್ಲಿ ಅಳವಡಿಸಿಕೊಳ್ಳಲು ಕಾರಣರಾದರು. ಗ್ರಂಥಾಲಯ ವರ್ಗೀಕರಣ ಪದ್ಧತಿ ಜಾರಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ಗ್ರಂಥಾಲಯಕ್ಕೆ ಬರುವ ಓದುಗರಿಗೆ ಪುಸ್ತಕಗಳನ್ನು ಒದಗಿಸುವ ಕಾರ್ಯ ಮಾಡಬೇಕು. ಎಸ್.ಆರ್.ರಂಗನಾಥನ್ ಅವರ ಆದರ್ಶ-ತತ್ವಗಳನ್ನು ಮೇಲ್ವಿಚಾರಕರಾದ ನಾವುಗಳು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಚೆಲುವರಾಜು, ಮೇಲ್ವಿಚಾರಕರಾದ ಮೂರ್ತಿ, ಮುತ್ತು, ಶಶಿಕಲಾ, ಕೃಷ್ಣೇಗೌಡ, ಸುರೇಶ್, ಕೃಷ್ಣಯ್ಯ, ಮಹಿಳಾ ಸಂಘದ ರತ್ನಮ್ಮ, ಪಲ್ಲವಿ ನೇತ್ರಾವತಿ, ಕುಸುಮಾ, ಮಧು, ವರ್ಷಾ, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net