ಜ್ಞಾನರ್ಜನೆ ಜತೆ ಇರಲಿ ಉತ್ತಮ ನಡೆ

CTD 1 SRS--002
Published on

ಚಿತ್ರದುರ್ಗ: ಶಿಕ್ಷಣವೆಂದರೆ ಕೇವಲ ಓದು, ಬರೆಯುವುದು ಕಲಿಯುವುದು ಅಲ್ಲವೆಂದು ಕವಿಯತ್ರಿ ತಾರಿಣಿ ಶುಭದಾಯಿನಿ ಹೇಳಿದರು.
ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣವೆಂಬುದು, ಜ್ಞಾನಾರ್ಜನೆಯೊಂದಿಗೆ ನಮ್ಮ ನಡವಳಿಕೆ, ಬದುಕುವ ಕಲೆ, ಕೌಶಲ ರೂಢಿಸಿಕೊಳ್ಳುವುದು, ಮೌಲ್ಯಗಳನ್ನು ಅರಿವುದಾಗಿದೆ, ನಡೆನುಡಿ, ಆಚಾರ-ವಿಚಾರಗಳೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಒತ್ತು ಕೊಡಬೇಕು. ಜೀವನದಲ್ಲಿ ಯಶಸ್ಸನ್ನು ಪಡೆಯಲು ಅಗತ್ಯ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಶುಭಕೋರಿದರು.
ಸಂಸ್ಥೆ ಕಾರ‌್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಪ್ರಾಚಾರ‌್ಯರಾದ ಎಂ.ಎಸ್.ಪ್ರಭಾಕರ್, ಎಂ.ಎಸ್.ಅರ್ಪಿತಾ, ಕೆ.ಜೆ.ಪದ್ಮಾವತಮ್ಮ, ಶೈಕ್ಷಣಿಕ ಸಹ ಸಂಯೋಜಕ ಬಿ.ವಿ.ರಾಕೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net