ಜ್ಞಾನಬುತ್ತಿಯಿಂದ ಟಿಇಟಿ ತರಬೇತಿ

Published on

ಮೈಸೂರು: ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಜ್ಞಾನಬುತ್ತಿ ಸಂಸ್ಥೆಯಿಂದ 30 ದಿನಗಳ ವಿಶೇಷ ತರಬೇತಿ ನೀಡಲಾಗುವುದು.
ರಾಜ್ಯ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆ ನವೆಂಬರ್ 6ರಂದು ನಿಗದಿ ನೀಡಲು ನಿರ್ಧರಿಸಲಾಗಿದ್ದು, ಆಸಕ್ತರು ಸೆ.16ರೊಳಗೆ ಸಂಜೆ 5.30ರಿಂದ 7.30ರವರೆಗೆ ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಎಚ್. ಬಾಲಕೃಷ್ಣ ಹೇಳಿಕೆಯಲ್ಲಿ ಕೋರಿದ್ದಾರೆ. ವಿವರಗಳಿಗೆ ಸಂಯೋಜಕರಾದ ಡಾ.ಉಮೇಶ್‌ಬೇವಿನಹಳ್ಳಿ (9945443034) ಅಥವಾ ಕೆ.ವೈ ನಾಗೇಂದ್ರ (8296788251) ಅನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net