

ಚಿತ್ರದುರ್ಗ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲೂಕಿನ ದೊಡ್ಡಸಿದ್ಧವ್ವನಹಳ್ಳಿಯ ಜ್ಞಾನಪೂರ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ 100ರಷ್ಟು ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ 60 ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿದ್ದು, ಈ ಪೈಕಿ 12 ಮಂದಿ 500ಕ್ಕೂ ಹೆಚ್ಚು ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಾದ ಪಿ.ಆರ್.ಸ್ಪೂರ್ತಿ-582, ಎಸ್.ಡಿ.ಕೃಪಾ ಧನುಷ್-568, ಜೆ.ಮಾನ್ಯಾ-567 ಕ್ರಮವಾಗಿ ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ.
ಕೆ.ಆರ್.ಪ್ರೀತಿಕಾ-566, ಕೆ.ಟಿ.ಅಪೇಕ್ಷಾ-560, ಕೆ.ವಿ.ವನಿಷಾ-546, ಕೆ.ಎನ್.ಸುಚಿತ್ರಾ-545, ಜಿ.ಆರ್.ಲಕ್ಷ್ಮಿ-540, ವೈ.ರೋಹಿಣಿ-539, ಎಸ್.ಪಿ.ಪಲ್ಲವಿ-538, ಜಿ.ಯು.ನಯನಾ-534, ಕೆ.ಬಸವಕಿರಣ-532 ಅಂಕದೊಂದಿಗೆ ಒಟ್ಟು 12 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಕಾರ್ಯದರ್ಶಿ ಎನ್.ಎಲ್.ವೆಂಕಟೇಶ್‌ರೆಡ್ಡಿ, ಸಹ ಕಾರ್ಯದರ್ಶಿ ಸುಹಾಸಿನಿ ವೆಂಕಟೇಶ್‌ರೆಡ್ಡಿ, ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.