ಜ್ಞಾನಪೂರ್ಣ ಶಾಲೆಗೆ ಬಹುಮಾನ

3
Published on

ಚಿತ್ರದುರ್ಗ: ಶಿಕ್ಷಣ ಇಲಾಖೆಯಿಂದ 2023-24ನೇ ಸಾಲಿನ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ತಾಲೂಕಿನ ಡಿ.ಎಸ್.ಹಳ್ಳಿಯ ಜ್ಞಾನಪೂರ್ಣ ಶಾಲೆಗೆ ವಿವಿಧ ಬಹುಮಾನ ಲಭಿಸಿದೆ.

ಶಾಲೆಯ ಅನನ್ಯಾ ಪಾಟೀಲ್ ನೇತೃತ್ವದ ತಂಡ ಬಾಸ್ಕೇಟ್ ಬಾಲ್‌ನಲ್ಲಿ ಪ್ರಥಮ, ಷಟಲ್ ದ್ವಿತೀಯ, 100ಮೀ, 400ಮೀ ಹರ್ಡೆಲ್ಸ್‌ನಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎನ್.ಎಲ್.ವೆಂಕಟೇಶ್‌ರೆಡ್ಡಿ, ಸಹ ಕಾರ್ಯದರ್ಶಿ ಸುಹಾಸಿನಿ, ದೈಹಿಕ ಶಿಕ್ಷಕರಾದ ಟಿ.ಬಾಬು, ಅನುಷಾ, ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net