ಜ್ಞಾನದೀಪ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟಕ್ಕೆ

04 HHR P 08
ದಾವಣಗೆರೆಯಲ್ಲಿ ನಡೆದ ಸಿಬಿಎಸ್‌ಇ 8ನೇ ದಕ್ಷಿಣ ವಲಯ ಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಜಯಗಳಿಸಿದ ಹೊಳೆಹೊನ್ನೂರಿನ ಜ್ಞಾನದೀಪ ಶಾಲೆಯ ವಿದ್ಯಾರ್ಥಿಗಳು.
Published on

ಹೊಳೆಹೊನ್ನೂರು: ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ರೆಸಿಡೆನ್ಷಿಯಲ್ ಶಾಲೆಯಲ್ಲಿ ನಡೆದ, ಸಿಬಿಎಸ್‌ಇ 8ನೇ ದಕ್ಷಿಣ ವಲಯ ಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಹೊಳೆಹೊನ್ನೂರು ಜ್ಞಾನದೀಪ ಶಾಲೆಯ 11 ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಿ.ಎಂ.ವೇದಾಂತ್, ಮಹಮ್ಮದ್ ಅಫಾನ್ ಅಹ್ಮದ್, ೀರಜ್, ಮಹಮ್ಮದ್ ಪೈಝಲ್, ಎಂ.ಮಂಜುನಾಥ, ಎ.ಆರ್.ಪ್ರಣವ್, ಡಿ.ಅದ್ವಿಕ್, ಅಥರ್ವ ತ್ರಿಲುಕ, ಲಕ್ಷ ರಾವ್ ಎ. ಜಾಧವ್, ಎಂ.ಎಂ.ಅಂಕಿತ್, ಎಂ.ಎಸ್.ಕಿಶನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 9ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

14ವಷರ್ದವರ ವಿಭಾಗದ 100 ಮೀಟರ್ ಓಟದಲ್ಲಿ ಅಥರ್ವ ಬೆಳ್ಳಿ ಪದಕ, 4100 ರಿಲೇಯಲ್ಲಿ ಕಿಶನ್, ಅಂಕಿತ್, ಲಕ್ಷ, ಅಥರ್ವ ಬಂಗಾರದ ಪದಕ. 4400 ರಿಲೆಯಲ್ಲಿ ಸಿರಿಗೌರಿ, ಲೇಖನ, ಧನ್ಯ, ಎಚ್.ಡಿ. ಭೂಮಿಕಾ, ಅಹ್ಹಾನ ಪ್ರಸನ್ನ ಕಂಚಿನ ಪದಕ ಪಡೆದಿದ್ದಾರೆ.

17 ವರ್ಷದವರ ವಿಭಾಗದ ಗುಂಡು ಎಸೆತ ಮತ್ತು ಡಿಸ್ಕಸ್ ಥ್ರೋನಲ್ಲಿ ವೇದಾಂತ್ ಬಂಗಾರದ ಪದಕ, 400 ಮೀಟರ್ ಓಟದಲ್ಲಿ ಮಹಮ್ಮದ್ ಅರ್ಫಾನ್ ಬೆಳ್ಳಿ ಪದಕ, 200 ಮೀಟರ್ ಓಟದಲ್ಲಿ ಅಥರ್ವ ಕಂಚಿನ ಪದಕ, ಎತ್ತರ ಜಿಗಿತದಲ್ಲಿ ಕಿಶನ್ ಕಂಚಿನ ಪದಕ, 4400 ಬಾಲಕರ ರಿಲೇಯಲ್ಲಿ ಮಂಜುನಾಥ್, ಅದ್ವಿಕ್, ೀರಜ್, ಮಹಮ್ಮದ್ ಅಫಾನ್ ಬಂಗಾರದ ಪದಕ ಪಡೆದಿದ್ದಾರೆ. 4100 ರಿಲೆಯಲ್ಲಿ ಮಹಮ್ಮದ್ ಪೈಝಲ್, ಮಂಜುನಾಥ, ಮೊಹಮ್ಮದ್ ಅಫಾನ್, ೀರಜ್, ಜಿ. ಪ್ರಣವ್ ಬಂಗಾರದ ಪದಕ ಪಡೆದಿದ್ದಾರೆ.

ದೈಹಿಕ ಶಿಕ್ಷಣ ವಿಭಾಗದ ಮಹಾವೀರ್ ಹೆಗಡೆ ಹಾಗೂ ಅಥ್ಲೆಟಿಕ್ಸ್ ವಿಭಾಗದ ತರಬೇತುದಾರ ಪುರುಷೋತ್ತಮ್, ತಂಡದ ವ್ಯವಸ್ಥಾಪಕರಾಗಿ ಮುನೇಶ್ವರಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net