ಜ್ಞಾನದಿಂದ ಶ್ರೀಮಂತರೆಂದು ಕರೆಸಿಕೊಳ್ಳ ಬೇಕು

CTD SRS----00004
Published on

ಚಿತ್ರದುರ್ಗ: ಹಣದಿಂದ ಖ್ಯಾತಿ ಗಳಿಸುವುದಕ್ಕಿಂತ ಜ್ಞಾನದಿಂದ ಶ್ರೀಮಂತನು ಎಂದು ಕರೆಸಿಕೊಳ್ಳುವಂತಾಗಬೇಕು ಎಂದು ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಹೇಳಿದರು.
ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಎಸ್‌ಆರ್‌ಎಸ್ ಚಾಣಕ್ಯ-2024 ಫೌಂಡೇಷನ್’ ತರಗತಿಗಳ 25 ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಪಿಯುಸಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಬಹು ಆಯ್ಕೆ ಮಾದರಿ ನೀಟ್, ಸಿಇಟಿ, ಜೆಇಇ ಪರೀಕ್ಷೆಗಳಿಗೆ ಅನುಗುಣವಾಗಿ ನುರಿತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ ಎಂದರು.
ತರಬೇತಿ ಸಂಚಾಲಕ ಡಿ.ಶ್ರೀನಿವಾಸಕುಮಾರ್, ಅಮಾನ್, ಕನ್ನಡ ಉಪನ್ಯಾಸಕ ಎಚ್.ಅಣ್ಣಪ್ಪ ಮಾತನಾಡಿದರು. ಉಪ ಪ್ರಾಚಾರ್ಯ ಬಿ.ಮನೋಹರ ಅವರು ಸಿಇಟಿ, ನೀಟ್, ಜೆಇಇ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net