ಜ್ಞಾನದಿಂದ ಅಜ್ಞಾನ ದೂರ

11telsang1
Published on

ತೆಲಸಂಗ: ನಮ್ಮ ಅಂತರಂಗದ ಅಜ್ಞಾನದ ಕತ್ತಲೆ ಹೋಗಲಾಡಿಸುವ ಮಾರ್ಗವೇ ಜ್ಞಾನ ಎಂದು ಜುಂಝರವಾಡದ ಬಸವರಾಜೇಂದ್ರ ಶರಣರು ಹೇಳಿದರು.

ಗ್ರಾಮದಲ್ಲಿ ಈಚಗೆ ಹಿರೇಮಠದಲ್ಲಿ ನಡೆದ ಮಾಸಿಕ ಶಿವಾನುಭವ ಗೋಷ್ಠಿ ಜ್ಞಾನ ಬೆಳಗು ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ಹೇಳಿದಂತೆ, `ದೇಹವೇ ದೇಗುಲ. ನಮ್ಮ ದೇಹ, ಮನಸ್ಸನ್ನು ಮತ್ತು ಆತ್ಮವನ್ನು ಶುದ್ಧವಾಗಿಟ್ಟುಕೊಳ್ಳುವುದೇ ನಿಜವಾದ ಶಿವಾನುಭವ ಎಂದರು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಇಂದಿನ ಗಡಿಬಿಡಿ ಬದುಕಿನಲ್ಲಿ ನಾವು ಹೊರಗಿನ ಜಗತ್ತಿನ ಜ್ಞಾನದ ಹಿಂದೆ ಓಡುತ್ತಿದ್ದೇವೆ. ಆದರೆ, ನಮ್ಮೊಳಗಿನ ಜ್ಞಾನ ಅರಿಯಲು ಮರೆತಿದ್ದೇವೆ. ಇಂತಹ ಸಂದರ್ಭದಲ್ಲಿ ಜ್ಞಾನದ ಬೆಳಗು ನೀಡುವ ಕಾರ್ಯವನ್ನು ಗೋಷ್ಠಿಗಳು ಮಾಡುತ್ತಿವೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕಿ ಶಾರವ್ವ ಪರುಶೆಟ್ಟಿ, ಸುಶೀಲಾ ಪಟ್ಟಣಶೆಟ್ಟಿ, ಕವಿತಾ ಹತ್ತಿ, ಶಿವಲೀಲಾ ಪಟ್ಟಣಶೆಟ್ಟಿ, ದೀಪಾ ಹತ್ತಿ, ಶೃತಿ ದಶಮಾ, ಕಾಶಿಬಾಯಿ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net