

ಚಿಕ್ಕೋಡಿ: ಜ್ಞಾನದ ಹಸಿವು ಇಂಗಿಸುವ ಪರಮೋಚ್ಛ ಶಕ್ತಿ ಶಿಕರಲ್ಲಿದೆ. ದೇಶದ ಅಭ್ಯುದಯಕ್ಕೆ ಸುಭದ್ರ ಅಡಿಪಾಯ ಹಾಕುವ ಮಹತ್ತರ ಜವಾಬ್ದಾರಿ ಶಿಕರ ಮೇಲಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಜಿಪಂ, ಶಾಲಾ ಶಿಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಶೈಣಿಕ ಜಿಲ್ಲೆ ಚಿಕ್ಕೋಡಿ ಹಾಗೂ ಬಿಇಒ ಕಾರ್ಯಾಲಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರು ನೀಡಿದ ಚಿಕ್ಕೋಡಿ ಶೈಣಿಕ ಜಿಲ್ಲಾದ್ಯಂತ ಲ್ಯಾಪ್ಟಾಪ್ ಹಾಗೂ ಸ್ಕಾನರ್/ಕಲರ್ ಪ್ರಿಂಟರ್ಗಳನ್ನು 30 ವಿವಿಧ ಶಿಣ ಸಂಸ್ಥೆಗಳಿಗೆ ಶಾಸಕರು ಹಸ್ತಾಂತರಿಸಿದರು.ಶಿಕರಿಗೆ ಸೇವಾ ಸನ್ಮಾನ, ವಿವಿಧ ಹಂತದ ಅತ್ಯುತ್ತಮ ಶಿಕ ಪ್ರಶಸ್ತಿ, ಸ್ಕೌಟ್ಸ ಹಾಗೂ ಗೈಡ್ಸ್ ಅತ್ಯುತ್ತಮ ಶಿಕ ಪ್ರಶಸ್ತಿ ವಿತರಿಸಲಾಯಿತು.
ತಹಸೀಲ್ದಾರ್ ಸಿ.ಎಸ್. ಕುಲಕರ್ಣಿ, ಎಂ.ಪಿ.ಜಿರಗಿಹಾಳ, ಸಾರ್ವಜನಿಕ ಶಿಣ ಇಲಾಖೆ ಉಪನಿರ್ದೆಶಕ ಮೋಹನ ಹಂಚಾಟೆ, ಬಿಇಒ ಬಿ.ಎ.ಮೇಕನಮರಡಿ, ಎಸ್.ಎಂ.ಲೋಕನ್ನವರ, ಸತೀಶ ಕುಲಕರ್ಣಿ, ಅನಿಲ ಪಾಟೀಲ, ಪುರಸಭೆ ಸದಸ್ಯರಾದ ವರ್ಧಮಾನ ಸದಲಗಿ, ಇಾರ್ನ್ ಬೇಪಾರಿ, ಗುಲಾಬ್ ಹುಸೇನ್ ಬಾಗವಾನ್, ಅನಿಲ ಮಾನೆ ಇತರರಿದ್ದರು.