

ಕಲಬುರಗಿ: ತಜ್ಞರು, ಪ್ರಾಜ್ಞರು, ಅನುಭವಿಗಳು, ಸಂಶೋಧಕರು, ಹಿರಿಯ ಐಪಿಎಸ್, ಐಎಎಸ್ ಅಧಿಕಾರಿಗಳ ಮಾರ್ಗದರ್ಶನದ ನುಡಿ, ನಾಡಿನ ವಿವಿಧೆಡೆಯ ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಮಳಿಗೆಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು ಎಂಬ ಪಾಲಕರು, ಮಕ್ಕಳ ಪ್ರಶ್ನೆಗಳಿಗೆ ಉತ್ತರ, ಪ್ರದರ್ಶನದಲ್ಲಿ ವಿಜ್ಞಾನದ ಜ್ಞಾನ, ನಗೆಯ ಬುಗ್ಗೆ, ಸಂಗೀತದ ಗಾನಸುಧೆ, ನಗರದ ವಿವಿಧ ಶಾಲೆ, ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು, ಮಕ್ಕಳು, ಉಪನ್ಯಾಸಕರೊಂದಿಗೆ ಜ್ಞಾನದ ಸಮ್ಮಿಲನ...
ನಾಡಿನ ನಂ.೧ ವಿಜಯವಾಣಿ ದಿನಪತ್ರಿಕೆ, ಬೀದರ್ ಜಿಲ್ಲೆಯ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ವಸತಿ ಮಹಾವಿದ್ಯಾಲಯ ಸಹಯೋಗ ಹಾಗೂ ನಾಡಿನ ವಿವಿಧ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಡಿ ಕಲಬುರಗಿಯಲ್ಲಿ ಆಯೋಜಿಸಿದ್ದ ಎರಡು ದಿನದ ಎಜುಕೇಷನ್ ಎಕ್ಸ್ಪೋಕ್ಕೆ ಶನಿವಾರ ಸಾಧಕರು, ತಜ್ಞರು, ಹಿರಿಯ ಐಪಿಎಸ್, ಐಎಎಸ್ ಅಧಿಕಾರಿಗಳು, ಉಪನ್ಯಾಸಕರ ಜ್ಞಾನಧಾರೆ, ಜನಪ್ರತಿನಿಧಿಗಳ ಸ್ಫೂರ್ತಿಯ ಮಾತುಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.
ಶನಿವಾರ ಬೆಳಗ್ಗೆ ಕೊಪ್ಪಳದ ಶ್ರೀ ಅಭಿನವ ಗವಿಸಿz್ದೆÃಶ್ವರ ಸ್ವಾಮೀಜಿ, ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟz್ದÉÃವರ ಸಾನ್ನಿಧ್ಯದಲ್ಲಿ ಶುಭಾರಂಭವಾದ ಮೇಳದಲ್ಲಿ ಎರಡು ದಿನ ಏಳು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಪ್ರದರ್ಶಿನಿ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರವೇಶ, ಪ್ರವೇಶ ಪರೀಕ್ಷೆ, ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳಿಗೆ ಉತ್ತರ ಕಂಡುಕೊAಡರು.
ಎಲ್ಲ ವಿದ್ಯಾರ್ಥಿಗಳು ಹುಗ್ಗಿ, ಪಲಾವ್, ಸಾಂಬಾರ, ಮೊಸರನ್ನ, ಉಪ್ಪಿನಕಾಯಿಯ ಭರ್ಜರಿ ಊಟ ಸವಿದು, ಜ್ಞಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಪ್ರವೇಶ, ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತ ಬಿತ್ತಿಪತ್ರ, ಮಾಹಿತಿ ಪತ್ರಗಳನ್ನು ನೀಡಿ, ವಿಚಾರ ವಿನಿಮಯ ಮಾಡಿಕೊಂಡರು.