

ಕುಡಚಿ: ಹೃದಯದಲ್ಲಿ ಜ್ಞಾನದ ದೀಪ ಪ್ರಜ್ವಲಿಸಿದಾಗ ಮಾತ್ರ ಬದುಕು ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯ ಎಂದು ಶಾಂತಮೂರ್ತಿ ಆಚಾರ್ಯ 108 ಶಾಂತಿಸೇನ ಮುನಿ ಮಹಾರಾಜರು ಹೇಳಿದ್ದಾರೆ. ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದ ಮೂಲ ನಾಯಕ 1008 ಪಾರ್ಶ್ವನಾಥ ತೀರ್ಥಂಕರ ಜಿನಮಂದಿರದಲ್ಲಿ ಹಮ್ಮಿಕೊಂಡಿದ್ದ 1008 ಭಗವಾನ ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ಬುಧವಾರದ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.
ಉಪಾಧ್ಯ ಆದಿನಾಥ ಹಾಗೂ ಉಪಾಧ್ಯ ಮಹೇಂದ್ರ ಮಾತನಾಡಿದರು. ಪ.ಪೂ. ಶ್ರಮಣರತ್ನ ಆಚಾರ್ಯ 108 ಸುಬಲಸಾಗರ ಮುನಿಮಹಾರಾಜರ ಪರಮಶಿಷ್ಯರಾದ ಪಪೂ ಶಾಂತಮೂರ್ತಿ ಆಚಾರ್ಯ 108 ಶಾಂತಿಸೇನ ಮುನಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ನಾಂದಣಿ ಮಠದ ಪಪೂ ಸ್ವಸ್ತಿಶ್ರೀ ಜಿನಸೇನ ಭಟ್ಟಾಕರ ಪಟ್ಟಾಚಾರ್ಯ ಸ್ವಾಮೀಜಿ, ಪಪೂ ಆರ್ಯಿಕಾ 105 ಕರುಣಾಮಾತಾಜಿ ಪಪೂ ಆರ್ಯಿಕಾ ರತ್ನ 105 ಸುಮತಿಮಾತಾಜಿ, ಪಪೂ ಆರ್ಯಿಕಾ ರತ್ನ 105 ಅಜಿತಮಾತಾಜಿ, ಪಪೂ ಆರ್ಯಿಕಾ ರತ್ನ 105 ವಿಶಾಲಮತಿ ಮಾತಾಜಿ, ಪಪೂ ಆರ್ಯಿಕಾ 105 ಸುವರ್ಣಮತಿ ಮಾತಾಜಿ ಮತ್ತಿತರರು ಇದ್ದರು. ಬೆಮುಲ್ ಅಧ್ಯಕ್ಷ ವಿವೇಕರಾವ ಪಾಟೀಲ ಶ್ರೀಗಳ ಆಶೀರ್ವಾದ ಪಡೆದರು.
ಯಾರಿಗೂ ಸಮಸ್ಯೆಯಾಗಿಲ್ಲ: ಮಂಗಳವಾರ ಸುರಿದ ಮಳೆಯಿಂದಾಗಿ ಗುಂಡವಾಡದಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಪೂಜಾ ಮಂಟಪದ ಛಾವಣಿ ಹಾರಿ ಹೋಗಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಾಳಿಗೆ ಪತ್ರಾಸ್‌ಗಳು ಹಾರಿಹೋಗಿದ್ದು ನಿಜ. ಆದರೆ, ಯಾರಿಗೂ ಸಮಸ್ಯೆಯಾಗಿಲ್ಲ. ಎಲ್ಲರೂ ಕ್ಷೇಮವಾಗಿದ್ದಾರೆ. ಯಥಾಸ್ಥಿತಿಯಂತೆ ಧಾರ್ಮಿಕ ಕಾರ್ಯಕ್ರಮ ಮುಂದುವರಿದಿವೆ ಎಂದು ಜಾತ್ರಾ ಕಮಿಟಿ ವಿಜಯವಾಣಿಗೆ ಮಾಹಿತಿ ನೀಡಿದೆ.