

ಬೀದರ್: ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಮರ್ಥವಾಗಿ ಎದುರಿಸಲು ನಿತ್ಯವೂ ದಿನಪತ್ರಿಕೆ ಓದುವುದು ತೀರ ಅಗತ್ಯವಿದೆ ಎಂದು ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು.
ಕಾಲೇಜಿನಲ್ಲಿ ಬಿಎಸ್ಸಿ, ಬಿಸಿಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲೆ, ಸಾಹಿತ್ಯ, ಸಂಗೀತ, ಬರಹ, ಕ್ರೀಡೆ, ಚಿತ್ರಕಲೆ, ಭಾಷಣ ಮುಂತಾದ ಸೂಪ್ತವಾದ ಕೌಶಲ ಅಡಗಿರುತ್ತವೆ. ಇದನ್ನು ಹೊರತಂದಲ್ಲಿ ಸಾಧನೆ ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಕ್ಷೇತ್ರಗಳ ಜ್ಞಾನ ಮುಖ್ಯ.ಇದಕ್ಕೆ ಪತ್ರಿಕೆ ಓದುವುದು ಅಗತ್ಯ. ನಮ್ಮೊಳಗೆ ಕೌಶಲತೆ ಇದ್ದರೆ ಸಮಾಜಮುಖಿಯಾಗಿ ಕೆಲಸ ಮಾಡಲು ಸಾಧ್ಯ ಎಂದರು.
ಉಪ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಹಂಗರಗೆ ಮಾತನಾಡಿದರು. ಡಾ. ಶಾಮಕಾಂತ ಕುಲಕರ್ಣಿ, ಅನೀಲಕುಮಾರ ಚಿಕ್ಕಮಾಣೂರ್, ಡಾ. ಮಾದಯ್ಯ ಸ್ವಾಮಿ, ಸೋಮನಾಥ ಮುದ್ದಾ, ಅಶ್ವಿನಕುಮಾರ ಚವ್ಹಾಣ್, ಶಿವಲೀಲಾ ಪಾಟೀಲ್, ಎಂ.ಎಸ್.ಚಲ್ವಾ, ಸುನೀಲ ಮೂಲಗೆ, ಡಾ.ಸುನೀತಾ ಕೂಡ್ಲಿಕರ್, ಪ್ರೊ.ರಾಜೇಂದ್ರ ಬಿರಾದಾರ, ಸಚಿನ್ ವಿಶ್ವಕರ್ಮ ಇದ್ದರು. ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘದ ಮುಖ್ಯಸ್ಥ ಶ್ರೀಕಾಂತ ದೊಡ್ಡಮನಿ ಸ್ವಾಗತಿಸಿದರು.