ಜ್ಞಾನ ಮತ್ತು ಕೌಶಲ್ಯ ಉದ್ಯೋಗಕ್ಕೆ ನೆರವು

27 yerriswamy 03
Published on

ಬಳ್ಳಾರಿ : ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಗಣಕೀಕರಣದ ಜ್ಞಾನ ಮತ್ತು ತಂತ್ರಾಂಶ ಕೌಶಲ್ಯವನ್ನು ಪಡೆದುಕೊಂಡರೆ, ಭವಿಷ್ಯದಲ್ಲಿ ಉದ್ಯೋಗಾವಕಾಶಗಳ ಬಾಗಿಲು ತೆರೆಯುವುದರಲ್ಲಿ ಸಂಶಯವಿಲ್ಲ ಎಂದು ತರಬೇತಿದಾರ ಅನಿತಾ ರಾಜ್ ಹೇಳಿದರು.
ಇಲ್ಲಿನ ಎಸ್‌ಎಸ್‌ಎ ಕಾಲೇಜಿನಲ್ಲಿ ನಾಂದಿ ಫೌಂಡೇಶನ್ ಹಾಗೂ ಮಹೇಂದ್ರ ಪ್ರೈಡ್ ಕ್ಲಾಸ್ ರೂಂ ಸಹಯೋಗದೊಂದಿಗೆ ಸೋಮವಾರ ನಡೆದ ಒಂದು ವಾರದ ಸಾಕ್ಷರತಾ ತಂತ್ರಜ್ಞಾನ ಮತ್ತು ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ತರಬೇತಿಯ ಮೂಲಕ ಸಂದರ್ಶನಗಳನ್ನು ಸುಲಭವಾಗಿ ಎದುರಿಸಲು ಬೇಕಾದ ಕೌಶಲ್ಯಗಳನ್ನು ಕಲಿಸಿಕೊಡುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ತರಬೇತಿದಾರ ಸ್ಯಾಮುವೆಲ್ ಜಾನ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಮತ್ತು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ಇಂತಹ ತರಬೇತಿಯು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಶಿಸ್ತು , ಶ್ರದ್ಧೆಯೊಂದಿಗೆ ಇಂತಹ ತರಬೇತಿಗಳಿಂದ ಉನ್ನತ ಮಟ್ಟ ತಲುಪಲು ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಖಂಡಿತ ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net