ಜ್ಞಾನ ಅತ್ಯಂತ ಪ್ರಮುಖ ಸಂಪತ್ತು

12Sambaragi1
Published on

ಸಂಬರಗಿ: ಜ್ಞಾನ ಅತ್ಯಂತ ಪ್ರಮುಖ ಸಂಪತ್ತು. ವೈರಿಯಿಂದಲೂ ಜ್ಞಾನ ಪಡೆಯುವುದರಲ್ಲಿ ತಪ್ಪಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಂಜಯ ತಳವಳಕರ ಹೇಳಿದರು.

ಶಿರೊಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ, ಜ್ಯೋತಿಬಾ ಫುಲೆ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ ಒಳ ಜಾತಿಗಣತಿ ಕರಪತ್ರ ಬಿಡುಗಡೆ ಮಾಡಲಾಯಿತು.

ಮುಖಂಡರಾದ ಬಾಳಕೃಷ್ಣ ಭಜಂತ್ರಿ, ಮಚೇಂದ್ರ ಖಂಡೆಕರ, ಕುಮಾರ ಬನಸೋಡೆ, ಪ್ರಕಾಶ ಕಾಂಬಳೆ, ಸುಭಾಸ ಕಾಂಬಳೆ, ವಿಜಯ ಅಠವಲೆ, ಸುನೀಲ ಖಂಡೆಕರ, ಸದಾಶಿವ ಖಂಡೆಕರ, ಸದಾಶಿವ ಗಟಕಾಂಬಳೆ, ಜಯವಂತ ಕಾಂಬಳೆ, ಕಿರಣ ಗಸ್ತಿ, ಅಭಿಜಿತ ಖಂಡೆಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net