ಜೋಡೆತ್ತು ಪೂಜೆಗೆ ಸೀಮಿತವಾಗದಿರಲಿ

8ATHNAIGRAMIN1
Published on

ಅಥಣಿ ಗ್ರಾಮೀಣ: ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ವಿಶಿಷ್ಟ ಆಚರಣೆಯಾಗಿದ್ದು, ಎಲ್ಲರೂ ಭಕ್ತಿ ಭಾವದಿಂದ ಆಚರಿಸಬೇಕು ಎಂದು ಅಥಣಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಕಮಿಟಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಂಬಿ ಐದೇಶಿ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀಶೈಲ ಮಲ್ಲಯ್ಯನು ಕಂಬಿಯ ಮೂಲಕ ಗ್ರಾಮಕ್ಕೆ ಆಗಮಿಸಿ ವರ್ಷ ಪೂರ್ತಿ ಮಾರ್ಗದರ್ಶನ ನೀಡುವನು ಎಂಬ ನಂಬಿಕೆಯಿದೆ. ಆದರೆ, ಇಂದು ಕಂಬಿ ಮಲ್ಲಯ್ಯನ ಪೂಜೆಯನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸಿ ಎಲ್ಲ ಗ್ರಾಮಗಳಲ್ಲಿ ಜೋಡೆತ್ತುಗಳ ಕೃಷಿ ನಾಶ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಂಚಿನಾಳದ ಮಹೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಂಬಿ ಮಲ್ಲಯ್ಯನ ಗ್ರಾಮದ ಜೋಡೆತ್ತುಗಳು ಭಾವೈಕ್ಯತೆಯ ಸಂಕೇತ. ಹೀಗಾಗಿ, ಗ್ರಾಮದಲ್ಲಿ ಜೋಡೆತ್ತುಗಳು ಸದಾ ಉಳಿಯಬೇಕು ಎಂದರು. ಸುಮಂಗಲೆಯರು ಕುಂಭಾರತಿಯೊಂದಿಗೆ ಮಲ್ಲಯ್ಯ ದೇವಸ್ಥಾನಕ್ಕೆ ಆಗಮಿಸಿ ಕಂಬಿ ಮಲ್ಲಯ್ಯನಿಗೆ ಪೂಜೆ ಸಲ್ಲಿಸಿ ಬೆಲ್ಲ ಅರ್ಪಿಸಿ ಭಕ್ತಿ ಮೆರೆದರು.

ಅಶೋಕ ಮಗದುಮ್ಮ, ಗುರುಪಾದ ಸವದಿ, ಶ್ರೀಶೈಲ ಅಂದಾನಿ, ಮಲ್ಲಪ್ಪ ಘಸ್ತಿ, ಗುರುಶಾಂತ ಕರಡಿಮಠ, ಪಿ.ಎಲ್.ಪೂಜಾರಿ, ಬಸಪ್ಪ ಗಣಿ, ಸಚಿನ ಹಿರೇಮಠ, ರಾಜಶ್ರೀ ಪದಮಣ್ಣವರ, ಶಾರವ್ವ ಕಚ್ಚುನವರ, ಕಸ್ತೂರಿ

ಮಂಟೂರ, ಪುಟ್ಟವ್ವ ಕಳ್ಳಿ, ಶ್ರೀದೇವಿ ಬದ್ರಣ್ಣವರ, ಗೌರವ್ವ ಮಠಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net