ಜೋಕಾಲಿ ಅಟದ ಸಂಭ್ರಮ

28KUDLIGI4
Published on

ಕೂಡ್ಲಿಗಿ: ತಾಲೂಕಿನಲ್ಲಿ ಸೋಮವಾರ ನಾಗ ಚೌತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆ ಮನೆ ಅಂಗಳ ಸಾರಿಸಿದ ಮಹಿಳೆಯರು ನಾಗದೇವತೆಗಳ ರಂಗೋಲಿ ಹಾಕಿ ಬಣ್ಣ ತುಂಬಿದರು. ಬಗೆ, ಬಗೆಯ ಹೂವುಗಳಿಂದ ಅಲಂಕರಿಸಿದರು. ಕುಟುಂಬದ ಸದಸ್ಯರೊಂದಿಗೆ ನಾಗರಕಟ್ಟೆಗಳಿಗೆ ತೆರಳಿ ಗೆಜ್ಜೆಹಾರ, ಪುಷ್ಪಗಳನ್ನು ಇರಿಸಿ, ಎಳ್ಳು, ಹಸಿಹಿಟ್ಟು ಚಿಗಳಿ ಅರ್ಪಿಸಿ ಹಾಲೆರೆದರು.

ಪೂಜೆ ಬಳಿಕ ಮನೆಯಲ್ಲಿ ತರಹವೇರಿ ಉಂಡೆಗಳು, ಮೆಣಸಿನಕಾಯಿ, ಈರುಳ್ಳಿ ಭಜ್ಜಿ, ಗಾರಿಗೆ ತಯಾರಿಸಿ ಹಬ್ಬದ ಊಟ ಸವಿದರು. ಊಟದ ನಂತರ ಮನರಂಜನೆಗಾಗಿ ಮಹಿಳೆಯರು, ಮಕ್ಕಳು ಜೋಕಾಲಿ ಆಡಿದರು. ಪುರುಷರು ತೆಂಗಿನಕಾಯಿ ಗುದ್ದುವ ಆಟವಾಡಿ ಹಬ್ಬದ ಮೆರುಗು ಹೆಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net