ಜೊಲ್ಲೆ ದಂಪತಿಯಿಂದ ಕ್ಷೇತ್ರ ಅಭಿವೃದ್ಧಿ

1Chikkodigrameen3
Published on

ಚಿಕ್ಕೋಡಿ ಗ್ರಾಮೀಣ: ನಿಪ್ಪಾಣಿ ಕ್ಷೇತ್ರದಲ್ಲಿ ಅಭಿವೃದ್ಧಿಯಿಂದ ಮನೆಮಾತಾಗಿರುವ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕ್ಷೇತ್ರ ಜನರ ಸಮಸ್ಯೆಗೆ ಕಿವಿಯಾಗಿದ್ದಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ಬನ್ನೆ

ಹೇಳಿದರು.

ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಪ್ರಯತ್ನದಿಂದ ಮಂಜೂರಾದ ೩೪.೬೮ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಅಲಗೊಂಡ ಪಾಟೀಲ ಪೂಜೆ ನೆರವೇರಿಸಿದರು. ಗುತ್ತಿಗೆದಾರ ವಿನೋದ ಸಂಕಪಾಳ, ಗಣ್ಯರಾದ ಚಿದಾನಂದ ಸದಲಗೆ, ಅನಿಲ ಖೋತ, ರಾಹುಲ್ ವಾಕಪಾಟೆ, ಸುನೀಲ ರೂಪನಾಳೆ ಚನಗೊಂಡ ಪಾಟೀಲ, ಮಿಥುನ ಪಾಟೀಲ, ಪ್ರಕಾಶ ತಹಸೀಲ್ದಾರ್, ಹನುಮಂತ ಸನದಿ, ಮಾಳು ಪಿಸುತ್ರೆ, ತಾತ್ಯಾಸಾಹೇಬ ಸದಲಗೆ, ಮಹಾವೀರ ಕೋಟಬಾಗಿ, ಶಿವಾನಂದ ಖೋತ, ಸಂಜಯ ಖೋತ, ಪ್ರಕಾಶ ಲಕ್ಕಾರ, ಬಾಬಾಸಾಹೇಬ ಜಾಧವ, ಬಾಬಾಸಾಹೇಬ ಇಂಗಳೆ, ಇರಗೌಡ ಪಾಟೀಲ, ಅಜಿತ ತಹಸೀಲ್ದಾರ್, ತಾತ್ಯಾಸಾಹೇಬ ಸದಲಗೆ, ಬಾಳಾಸಾಹೇಬ ಸದಲಗೆ, ಮಹಾವೀರ ಕೊಟಬಾಗಿ, ಗುಂಡು ಪಾಟೀಲ, ಅಶೋಕ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net