ಜೊಲ್ಲೆ ದಂಪತಿ ಸೇವೆ ಮುಂದುವರಿಯಲಿ

10KOKATANUR-1-Web
ಝುಂಜರವಾಡ ಗ್ರಾಮದಲ್ಲಿ ಝುಂಜರವಾಡ ಗ್ರಾಮದಿಂದ ತುಂಗಳ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಯುವ ಮುಖಂಡ ಚಿದಾನಂದ ಸವದಿ ಚಾಲನೆ ನೀಡಿದರು. ಶೀತಲಗೌಡ ಪಾಟೀಲ, ಬಾಹುಬಲಿಗೌಡ ಪಾಟೀಲ, ಮುತ್ತಣ್ಣ ಹಿಡಕಲ್ಲ, ರಾಜೇಂದ್ರ ರೂಡಗಿ, ಎಸ್.ಬಿ.ಕರಡಿ ಇದ್ದರು.
Published on

ಕೊಕಟನೂರ: ಜೊಲ್ಲೆ ಚಾರಿಟೇಬಲ್ ಫೌಂಡೇಷನ್ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿರುವ ಜೊಲ್ಲೆ ದಂಪತಿಯಿಂದ ಇನ್ನೂ ಅನೇಕರಿಗೆ ನೆರವು ಸಿಗುವಂತಾಗಲಿ ಎಂದು ಯುವ ಮುಖಂಡ ಚಿದಾನಂದ ಸವದಿ ಆಶಿಸಿದ್ದಾರೆ.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಚಿಕ್ಕೋಡಿ ಸಂಸದರ ನಿಧಿಯಿಂದ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕರೊನಾದಿಂದ ಜನಜೀವನ ತತ್ತರಗೊಂಡಿದೆ. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿದರೆ ಶೀಘ್ರವಾಗಿ ಸೋಂಕಿನ ಭಯದಿಂದ ಎಲ್ಲರೂ ಹೊರಬರಬಹುದು ಎಂದರು.

ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ, ಸಮುದಾಯ ಭವನ, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅವರು ಪ್ರಯತ್ನಿಸುತ್ತಿದ್ದಾರೆ, ಗುತ್ತಿಗೆದಾರರು ಸಕಾಲಕ್ಕೆ ಕಾಮಗಾರಿ ಆರಂಭಿಸಬೇಕು ಎಂದರು.

ಮುಖಂಡ ಶೀತಲಗೌಡ ಪಾಟೀಲ ಮಾತನಾಡಿದರು. ಬಾಹುಬಲಿಗೌಡ ಪಾಟೀಲ, ಮುತ್ತಣ್ಣ ಹಿಡಕಲ್ಲ, ಮುತ್ತಣ್ಣ ಯಂಡೋಳಿ, ಭರತೇಶ ನೇಮಗೌಡ, ಅಣ್ಣಾಸಾಬ ಯಂಡೋಳಿ, ಪ್ರಕಾಶ ಬಡಿಗೇರ, ಮಹಾದೇವ ಚಿಪ್ಪಾಡಿ, ರಾವಸಾಬ ಸಂಕೋನಟ್ಟಿ, ಸುಶೀಲಕುಮಾರ ಪತ್ತಾರ, ಶಿವಾನಂದ ವಾಳವೆ, ಮಹಾವೀರ ಮಹಿಷವಾಡಗಿ, ಶ್ರೀಧರ ಹಂಡಿ, ನೀರಾವರಿ ಇಲಾಖೆಯ ರಾಜೇಂದ್ರ ರೂಡಗಿ, ಎಸ್.ಬಿ. ಕರಡಿ, ಭರತೇಶ ಮಹಿಷವಾಡಗಿ, ಶೇಖರ ರಾಠೋಡ, ನೇಮಿನಾಥ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net