ಜೊಲ್ಲೆ ದಂಪತಿ ಕೊಡುಗೆ ಅಪಾರ

21Npn3
Published on

ನಿಪ್ಪಾಣಿ: ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನದ ಫಲವಾಗಿ ಸೌಂದಲಗಾ ಗ್ರಾಮದ ಶ್ರೀ ಹಾಲಸಿದ್ಧನಾಥ ನಗರದಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಎಸ್‌ಸಿಪಿಟಿಸಿಎಲ್ ಯೋಜನೆಯಡಿ ೨೧ ಲಕ್ಷ ರೂ. ಅನುದಾನಕ್ಕೆ ಅನುಮೋದನೆ ದೊರಕಿದೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಾದಾಸಾಹೇಬ ಕಾಂಬಳೆ ಹೇಳಿದರು.

ತಾಲೂಕಿನ ಸೌಂದಲಗಾ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಸೌಂದಲಗಾ ಗ್ರಾಮಕ್ಕೆ ಜೊಲ್ಲೆ ದಂಪತಿ ಕೊಡುಗೆ ಅಪಾರವಾಗಿದೆ ಎಂದರು. ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಮಾತನಾಡಿ, ಕ್ಷೇತ್ರಕ್ಕೆ ಹೆಚ್ಚು ಅನುದಾನ ತರುವಲ್ಲಿ ಜೊಲ್ಲೆ ದಂಪತಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಹಿರಾಶುರ‍್ಸ ಉಪಾಧ್ಯಕ್ಷ ಪವನಕುಮಾರ ಪಾಟೀಲ, ಸಂಜಯ ಶಿಂತ್ರೆ, ಗಣಪತಿ ಗಾಡಿವಡ್ಡರ, ಎಸ್.ಎಸ್. ಢವಣೆ, ಗ್ರಾಪಂ ಅಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಸದಸ್ಯ ವಿಕ್ರಮ ಪಾಟೀಲ, ವಿನೋದ ಮಾನೆ, ಸರ್ಜೇರಾವ ಸಾಳುಂಕೆ, ಅನಿತಾ ಶೇವಾಳೆ, ಅಪ್ಪಾಸಾಹೇಬ ಢವಣೆ, ಆನಂದ ಸುರವಸೆ, ಗಣಪತಿ ಕೋಠಾವಳೆ, ಇಂದ್ರಜಿತ್ ಪಾಟೀಲ, ಬಂಡಾ ಹಟ್ಕರ್, ಡಾ. ತಾನಾಜಿ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net