ಜೈವಿಕ ಇಂಧನ ಬಳಕೆಯಿಂದ ಪರಿಸರ ಸಮತೋಲನ

25 ckm 12
ಚಿಕ್ಕಮಗಳೂರು ಎಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಂತರಾಷ್ಟಿçÃಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ಉದ್ಘಾಟಿಸಿದರು. ಎ.ಎನ್.ಮಹೇಶ್, ಡಾ.ಸಿ.ಟಿ.ಜಯದೇವ್, ಡಾ.ಜಿ.ಎಂ.ಸತ್ಯನಾರಾಯಣ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಜೈವಿಕ ಇಂಧನ ಬಳಸುವುದರಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು. ಅಲ್ಲದೇ ಜಾಗತಿಕ ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಪಾಡಬಹುದು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ತಿಳಿಸಿದರು.

ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಂತರಾಷ್ಟಿçÃಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಸುಸ್ಥಿರÀ ಮತ್ತು ಸ್ವಾವಲಂಬಿ ಅಭಿವೃದ್ಧಿಗೆ ಜೈವಿಕ ಇಂಧನದ ಉತ್ಪಾದನೆ ಅತ್ಯಗತ್ಯ. ತ್ಯಾಜ್ಯ ಮೂಲಗಳಿಂದ ಜೈವಿಕ ಇಂಧನ ತಯಾರಿಕೆಗೆ ವಿಪುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುರಾದಲ್ಲಿ ಆತ್ಮ ನಿರ್ಭರತೆ ಸಾಧ್ಯವಿದೆ ಎಂದು ತಿಳಿಸಿದರು.

ಪ್ರಸ್ತುತ ಹೆಚ್ಚುತ್ತಿರುವ ಇಂಧನ ಬಳಕೆಯಿಂದ ಭೂಮಿಯ ಒಡಲೊಳಗಿನ ಸಾಂಪ್ರದಾಯಿಕ ಇಂಧನ ಮೂಲಗಳು ಬರಿದಾಗುತ್ತಿದೆ. ಕಚ್ಚಾತೈಲ ಆಮದು ಹೆಚ್ಚುತ್ತಿರುವ ಕಾರಣ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಪರ್ಯಾಯ ಇಂಧನ ಬಳಕೆ ಹೆಚ್ಚಾಗಬೇಕಿದೆ ಎಂದು ಹೇಳಿದರು.

ಹವಾಮಾನ ಮತ್ತು ಅದರ ಬದಲಾವಣೆಯಿಂದಾಗುವ ಪರಿಣಾಮಗಳಾದ ಜೀವಿಗಳ ನಷ್ಟ, ಆವಾಸ ಸ್ಥಾನಗಳ ನಾಶ, ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಜೈವಿಕ ಇಂಧನದ ಅಗತ್ಯವಿದೆ ಎಂದು ತಿಳಿಸಿದರು.

ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಭೂಮಿಯಿಂದ ತೆಗೆಯುವ ಪೆಟ್ರೋಲ್, ಡೀಸೆಲ್ ಮುಂದಿನ ತಲೆಮಾರಿಗೆ ಮುಗಿಯಬಹುದು. ದೇಶದ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಸ್ವಾವಲಂಬನೆಗೆ ಜೈವಿಕ ಇಂಧನ ಉತ್ಪಾದನೆಯ ಸಂಪನ್ಮೂಲಗಳಾದ ಸಸಿಗಳನ್ನು ಬೆಳೆಸುವುದು ಮುಖ್ಯವಾಗಿದೆ ಎಂದರು.

ಜೈವಿಕ ಇಂಧನವು ಇಂದಿನ ಯುಗದ ಪರ್ಯಾಯ ಇಂಧನವಾಗಿದ್ದು, ಈ ದಿಸೆಯಲ್ಲಿ ಪರಿಸರದಲ್ಲಿ ಜೈವಿಕ ಇಂಧನ ಮೂಲ ಸಸ್ಯಗಳಾದ ಬೇವು, ಹೊಂಗೆ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳಿಂದ ದೊರಕುವ ಬೀಜಗಳಿಂದ ಜೈವಿಕ ಇಂಧನ ಉತ್ಪಾದಿಸಲು ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಹೇಳಿದರು.

ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್ ಮಾತನಾಡಿ, ಇಂದಿನ ಜಾಗತಿಕ ಬದಲಾವಣೆ ಯಿಂದ ಕಚ್ಚಾ ತೈಲಗಳು ಮುಗಿದು ಹೋಗುತ್ತಿವೆ. ಇದರಿಂದ ಭವಿಷ್ಯದಲ್ಲಿ ಇಂಧನದ ಕೊರತೆ ಉಂಟಾಗಲಿದೆ. ಈ ದಿಸೆಯಲ್ಲಿ ನಾವು ನೈಸರ್ಗಿಕ ಸಂಪನ್ಮೂಲ ಉಳಿಸುವುದರೊಂದಿಗೆ ಪರ್ಯಾಯವಾಗಿ ಜೈವಿಕ ಇಂಧನ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆವಿದೆ ಎಂದರು.

ಇದೇ ವೇಳೆ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ಸತ್ಯನಾರಾಯಣ್ ಜೈವಿಕ ಇಂಧನ ಬಳಕೆ ಬಗ್ಗೆ ಸ್ವವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊ.ಬಸವರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net