

ಬಳ್ಳಾರಿ : ಜಿಲ್ಲೆ ಅಕ್ರಮ ಗಣಿಗಾರಿಕೆಯಿಂದ ದೇಶಾದ್ಯಂತ ಕುಖ್ಯಾತಿ ಪಡೆದಿತ್ತು, ಇಲ್ಲಿನ ಹಲವು ಶಾಸಕರು ಬಂಧನ ಭೀತಿ ಎದುರಿಸಿ ಬಂಧನ ಭೀತಿಗೂ ಒಳಪಟ್ಟರು. ದಶಕಗಳ ಬಳಿಕ ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಇಡಿ ವಶವಾಗುವ ಮೂಲಕ ಮತ್ತೋಮ್ಮೆ ಜಿಲ್ಲೆ ಮುನ್ನಲೆಗೆ ಬಂದಿದೆ.
ಕಳೆದ ಹತ್ತು ವರ್ಷಗಳ ಇತಿಹಾಸ ನೋಡಿದರೆ ಜಿಲ್ಲೆಯ ಕೆಲವೊಂದು ಹಾಲಿ ಮತ್ತು ಮಾಜಿ ಶಾಸಕರು ನಾನಾ ಕಾರಣಗಳಿಗೆ ಬಂಧನಕ್ಕೆ ಒಳಗಾಗಿದ್ದರು. ನಾಗೇಂದ್ರ ಮೊದಲು ಮಾಡಿ, ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕರಾದ ಆನಂದ ಸಿಂಗ್, ಸುರೇಶಬಾಬು, ಸೋಮಶೇಖರರೆಡ್ಡಿ, ಅನಿಲ್ ಲಾಡ್ ಸೇರಿದಂತೆ ವಿವಿಧ ಶಾಸಕರು ಬಂಧನಕ್ಕೆ ಒಳಗಾಗುವ ಮೂಲಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರ ಸಚಿವ ತಲೆದಂಡದ ಜತೆಗೆ ಇದೀಗ ಕಂಬಿ ಎಣಿಸುವ ಪರಿಸ್ಥಿತಿ ಬಂದಿರುವುದು. ಜಿಲ್ಲೆಯ ಮಟ್ಟಿಗೆ ಹೊಸದೇನಲ್ಲ.
ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಭೂತ ಜಯಗಳಿಸಿದ ಕಾಂಗ್ರಸ್‌ಗೆ ರಾಜ್ಯ ವಾಲ್ಮೀಕಿ ನಿಗಮದ ಹಗರಣವು ಬರ ಸಿಡಿಲು ಬಡಿದಂತೆಯಿತು. ಕಾಂಗ್ರೆಸ್ ಪಕ್ಷ ಫಿನಿಕ್ಸ್ ಪಕ್ಷಿಯಂತೆ ಎದ್ದು ಬರಲು ಕಾರ್ಯಕರ್ತರು ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಎಂಬುದು ಎಲ್ಲರಿಗೂ ತಿಳಿದಿರುವುದೆ. ಆದರೆ, ಈ ಹಗರಣ ನಾಗೇಂದ್ರ ಅವರ ಮಟ್ಟಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಶಾಸಕ ನಾಗೇಂದ್ರ 2008 ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಶಾಸಕರಾದರು, ನಾಲ್ಕನೆ ಬಾರಿ ಲಭಿಸಿರುವ ಸಚಿವ ಸ್ಥಾನವನ್ನು ಕಾಯ್ದುಕೊಳ್ಳಳುವಲ್ಲಿ ಒಂದು ವರ್ಷದಲ್ಲಯೇ ವಿಫಲವಾದಂತೆಯಾಗಿದೆ. 2008 ರಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಗೆಲವು ಸಾಧಿಸಿದರೆ, 2013ರಲ್ಲಿ ಶ್ರೀರಾಮುಲು ಹೊಸ ಪಕ್ಷ ಕಟ್ಟಿದ್ದರಿಂದ ಅತ್ತ ಬಿಜೆಪಿಯಿಂದ ಸ್ಪರ್ಧಿಸದೆ ಇತ್ತ ಶ್ರೀರಾಮುಲು ಪಕ್ಷದಿಂದ ಸ್ಪರ್ಧಿಸದೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಸಾಧಿಸಿದರು. ಎರಡು ಅವಧಿಯಲ್ಲಿ ಕೂಡ ಶ್ರೀರಾಮುಲು , ಜನಾರ್ದನರೆಡ್ಡಿ ಅವರ ಅಪ್ತ ವಲಯದಲ್ಲಿ ನಾಗೇಂದ್ರ ಗುರುತಿಸಿಕೊಂಡಿದ್ದರು. ಪಕ್ಷೇತರ ಶಾಸಕರ ಕೊನೆಯ ಅವಧಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2018 ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಶಾಸಕರಾಗಿ ಉಳಿಯಬೇಕಾಯಿತು. 2023 ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸದ್ದರಿಂದ ನಾಗೇಂದ್ರ ಸಚಿವ ಸ್ಥಾನ ಲಭಿಸಿತು. ಒಟ್ಟಾರೆಯಾಗಿ ಜಿಲ್ಲೆಯ ಶಾಸಕರು ಒಂದಲ್ಲ ಒಂದು ಕಾರಣದಿಂದ ಕಂಬಿ ಎಣಿಸುವಂತೆಯಾಗಿದೆ. ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕನೆಂದು ಬಿಂಬಿಸಿಕೊಂಡಿದ್ದ ಶ್ರೀರಾಮುಲು ಅವರನ್ನು ಸೋಲಿಸುವ ಮಟ್ಟಕೆ ಬೆಳೆಯುತ್ತೆನೆ ಎಂದು ಯಾರು ಊಹಿಸಿರಲಿಲ್ಲ. ಇಷ್ಟೆಲ್ಲ ಶ್ರಮಪಟ್ಟ ಫಲಕ್ಕೆ ಪ್ರತಿಫಲ ದೊರೆಯುವ ವೇಳೆಯ ವಾಲ್ಮೀಕಿ ಹಗರಣದಲ್ಲಿ ಸದ್ಯ ಬೆಂಗಳೂರಿನಲ್ಲಿ ಇಡಿ ವಶದಲ್ಲಿದ್ದಾರೆ. ಈ ಬಂಧನದಿಂದ ಆಕಾಶದತ್ತ ಹಾರಾಡುತ್ತಿದ್ದ ಗಾಳಿಪಟ ದಾರ ಹರಿದು ನೆಲಕ್ಕೆ ಉರುಳಿತು ಎಂಬಂತೆ ಆಯಿತು. ಸದ್ಯ ಇಡಿ ವಶದಲ್ಲಿರುವ ಶಾಸಕ ನಾಗೇಂದ್ರ ವಾಲ್ಮೀಕಿ ಹಗರಣದ ಆರೋಪ ಸಾಬೀತುದರೆ ಮರಳಿ ಜೈಲಿಗೆ ಸೇರಬಹುದ !.
ಬಂಧನ ಭೀತಿ ಎದುರಿಸಿದ ಶಾಸಕರು : ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಸಾಬೀತು ಹಿನ್ನಲೆ ಸಿಬಿಐ ದಾಳಿ ಎದುರಿಸಿ ಜೈಲು ಸೇರಿದ್ದರು. ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಸಹೋದರ ಜನಾರ್ದನರೆಡ್ಡಿ ಅವರನ್ನು ಜಾಮೀನು ಮೇಲೆ ತರಲು ಬೇಲ್ ಡೀಲ್ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಕಂಪ್ಲಿ ಶಾಸಕ ಜೆ.ಎನ್. ಗಣೇಶ ಬಿಡದಿ ರೆಸಾರ್ಟ್‌ನಲ್ಲಿ ಗಲಾಟೆ ನಡೆದ ಆರೋಪದ ಮೇಲೆ ಗುಜರಾತ್ ನಲ್ಲಿ ಬಂಧಿಸಿ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಮಾಜಿ ಶಾಸಕರಾದ ಆನಂದ ಸಿಂಗ್, ಸುರೇಶಬಾಬು, ಅನಿಲ್ ಲಾಡ್, ಶಾಸಕ ಬಿ. ನಾಗೇಂದ್ರ ಜಿಲ್ಲೆಯ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಕಂಬಿ ಎಣಿಸಿ, ಜಾಮೀನು ಮೇಲೆ ಹೊರಗಡೆ ಇದ್ದಾರೆ.
ರಾಜೀನಾಮೆ ನೀಡಿದವರು : 2013ರ ಕಾಂಗ್ರೆಸ್ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವಿರುದ್ಧ ಅಕ್ರಮ ಗಣಿಗಾರಿಕೆ, ಅರಣ್ಯ ನಾಶ ಪ್ರಕರಣದ ಮೇಲೆ ರಾಜೀನಾಮೆ ನೀಡಿದರು. ಬಳಿಕ ಜಿಲ್ಲಾ ಉಸ್ತುವಾರಿ ಯಾಗಿ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಸಚಿವ ಸ್ಥಾನ ಒಲಿದಿತ್ತು. ಅವರ ವಿರುದ್ದ ಅಕ್ರಮ ಮರಳುಗಾರಿಕೆ, ಅಕ್ರಮ ಮದ್ಯ ಮಾರಾಟದ ಆರೋಪಕ್ಕೆ ಸಂಬಂಧಿಸಿದಂತೆ ಅಂದಿನ ಕೂಡ್ಲಿಗಿ ವಿಭಾಗದ ಡಿವೈಎಸ್ಪಿ ಆಗಿದ್ದ ಅನುಪಮಾ ಶೆಣೈ, ಪರಮೇಶ್ವ ನಾಯ್ಕ ನಡುವೆ ವಿವಾದ ಸೃಷ್ಠಿಯಾಗಿತ್ತು. ಮಹಿಳಾ ಪೊಲೀಸ್ ಅಧಿಕಾರಿ ಬಗ್ಗೆ ಮೊಬೈಲ್‌ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ಆಡಿಯೋ ಲೀಕ್ ಆಗಿ ಗೊಂದಲ ಸೃಷ್ಟಿಸಿದ್ದರಿಂದ ರಾಜೀನಾಮೆ ನೀಡುವಂತಾಯಿತು. ಇದಲ್ಲದೆ ಮಾಜಿ ಸಚಿವ ಶ್ರೀರಾಮುಲು ಕೂಡ ಅಕ್ರಮ ಗಣಿಗಾರಿಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.