ಜೈಲಿನಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ

Crime Logo
Published on

ಕಲಬುರಗಿ: ನಗರ ಹೊರ ವಲಯದ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಸಂಜೆ ಶಿವಮೊಗ್ಗ ಮೂಲದ ಕೈದಿಗಳು ಹಾಗೂ ಕಲಬುರಗಿ ಮೂಲದ ಕೈದಿಗಳ ಮಧ್ಯೆ ಮಾರಾಮಾರಿಯಾದ ಘಟನೆ ನಡೆದಿದೆ. ಸಂಜೆ ವೇಳೆ ಊಟ ನೀಡುವಾಗ ಶಿವಮೊಗ್ಗ ಮೂಲದ ಕಳ್ಳತನ ಪ್ರಕಣದ ಆರೋಪಿ ಜತೆ ಕಲಬುರಗಿ ಮೂಲದ ಆರೋಪಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಒಂದು ಕ್ಷಣ ಕೈ ಕೈ ಮಿಲಾಯಿಸುವ ಹಂತಕ್ಕೆ ಜಗಳ ತಲುಪಿತ್ತು. ಆದರೆ ಸಕಾಲದಲ್ಲಿ ಕೇಂದ್ರ ಕಾರಾಗೃಹದ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಜಗಳವನ್ನು ತಡೆದಿದ್ದು, ಇಬ್ಬರನ್ನು ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಯಾವುದೇ ಪ್ರಕರಣ ಶನಿವಾರ ಸಂಜೆವರೆಗೆ ದಾಖಲಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net