

ಹಾಸನ: ಸೇಬು ಹಾಗು ಮೋಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪಿನ ಪ್ಯಾಕೆಟ್‌ಗಳನ್ನಿಟ್ಟು ಸ್ಟಿಕ್ಕರ್‌ನ್ನು ಅಂಟಿಸಿ, ಜೈಲಿನ ಕಾಪೌಂಟ್ ಒಳಗಡೆಗೆ ಎಸೆಯಲು ಹೋಗುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಂಬೇಡ್ಕರ್ ನಗರದ ತರಕಾರಿ ವ್ಯಪಾರಿ ತಬ್ರೇಜ್ (28), ಪೆನ್‌ಷನ್ ಮೊಹಲ್ಲಾದ ಗುಜರಿ ಅಂಗಡಿ ವ್ಯಾಪಾರಿ ವಾಸಿಂ (21) ಬಂಧಿತ ಆರೋಪಿಗಳು.ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಸೇಬು ಹಾಗು ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಮಾದಕ ವಸ್ತು ಗಾಂಜಾಸೊಪ್ಪನ್ನು ಇಟ್ಟು, ಜೈಲಿನ ಹಿಂದಿಯಿಂದ ಕಾಂಪೌಂಡ್ ಒಳಗೆ ಎಸೆಯಲು ಇಬ್ಬರು ಆರೋಪಿಗಳು ಹೊಂಚು ಹಾಕುತ್ತ ಜೈಲು ಸಮೀಪದ ನಗರದ ಹಳೇಬಸವಣ್ಣ ವೃತ್ತದ ಬಳಿ ಓಡಾಡುತ್ತಿದ್ದರು.
ಈ ವೇಳೆ ನಗರ ಠಾಣೆ ಪಿ.ಎಸ್.ಐ ರೇವಣ್ಣ ಹಾಗು ಸಿಬ್ಬಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರನ್ನು ವಿಚಾರಿಸಿ ಅವರ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೋಸುಂಬಿ ಹಣ್ಣು ಪತ್ತೆಯಾಗಿವೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಜೈಲ್‌ನೊಳಗೆ ಎಸೆಯಲು ಯತ್ನಿಸುತ್ತಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಗಾಂಜಾ ವಶಪಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.