ಜೈಲಿಗೆ ಭೇಟಿ ನೀಡಿದ ದರ್ಶನ್ ಪತ್ನಿ

Published on

ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ವಕೀಲರ‌ ಜತೆ ಇಲ್ಲಿನ ಕಾರಾಗೃಹಕ್ಕೆ ಗುರುವಾರ ಭೇಟಿ ನೀಡಿದರು.
ವಿಜಯಲಕ್ಷ್ಮೀ ಜತೆಯಲ್ಲಿ ‌ವಕೀಲ ಸುನಿಲ್ ಹಾಗೂ ಸಹೋದರ ‌ದಿನಕರ್ ತೂಗುದೀಪ ಸಮೇತರೊಂದಿಗೆ ಆಗಮಿಸಿ ಕೈಯಲ್ಲಿ ಎರಡು ಬ್ಯಾಗ್ ನಲ್ಲಿ ಡ್ರೈ ಪ್ರೂಟ್ಸ್ , ತಿಂಡಿ ತಿನಿಸು, ದೇವರ ಪ್ರಸಾದ ಹಾಗೂ‌ ಚಾರ್ಜ್ ಶೀಟ್ ಫೈಲ್ ಗಳನ್ನು ತರಲಾಗಿತ್ತು.
ದರ್ಶನ್ ಭೇಟಿ ಬಳಿಕ ವಕೀಲ ಸುನಿಲ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊಲೆ ಪ್ರಕರಣದ ಬಗ್ಗೆ ದರ್ಶನ್ ಜತೆ ಚರ್ಚೆ ಮಾಡಲಾಯಿತು. ಚಾರ್ಜ್ ಶೀಟ್ ನಲ್ಲಿ ಸಲ್ಲಿಕೆಯಾಗಿದ್ದ ಕೆಲ ಡೌಟ್ ಗಳ ಬಗ್ಗೆ ಬಗೆಹರಿಸಿಕೊಳ್ಳಲಾಯಿತು. ಈ ಸಂಬಂಧ ಹಿರಿಯ ವಕೀಲರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net