‌ಜೈಲಿಗೆ ನಟ ದರ್ಶನ್

Published on

ಬಳ್ಳಾರಿ : ಅಕ್ರಮ ಗಣಿಗಾರಿಕೆಯಿಂದ ದೇಶದ್ಯಾಂತ ಕುಖ್ಯಾತಿ ಪಡೆದಿದ್ದ ಜಿಲ್ಲೆಯು ಮತ್ತೋಮ್ಮೆ ಮುನ್ನಲೆಗೆ ಬಂದಿದೆ.
ರೇಣುಕಾ ಸ್ವಾಮಿ ಕೊಲೆ‌ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ‌ಜೈಲಿಗೆ ಸ್ಥಳಾಂತರ ಆಗುವ‌ ಮೂಲಕ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಪರಪ್ಪನ ಆಗ್ರಹಾರ‌ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ನನ್ನು ಬಳ್ಳಾರಿ ‌ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ‌ಕಾರಾಗೃಹದಲ್ಲಿ ನಟ ದರ್ಶನ್, ಸಹಚರರು ಹಾಗೂ ರೌಡಿ ಶೀಟರ್ ಗಳಿಗೆ‌ ವಿಶೇಷ ಅತಿಥ್ಯ ನೀಡಿದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಯಾಗಿತ್ತು. ಇದರನ್ವಯ ರಾಜ್ಯ ಸರ್ಕಾರ ದರ್ಶನ್ ಬೇರೆ ಜೈಲಿಗೆ‌ ಸ್ಥಳಾಂತರ ‌ಮಾಡುವುದಾಗಿ ಸೂಚಿಸಿ, ಅತಿಥ್ಯ ನೀಡಿದ ಆರೋಪದಡಿ ಜೈಲಿನ ಮುಖ್ಯ ಅಧೀಕ್ಷಕ , ಅಧೀಕ್ಷಕ ಮತ್ತು ಸಿಬ್ಬಂದಿ ಸೇರಿ ಒಂಬತ್ತು ‌ಮಂದಿಯನ್ನು ಅಮಾನತು ‌ಮಾಡಲಾಗಿತ್ತು.

ಪ್ರಮುಖ ನಾಯಕರು‌ ಜೈಲು ವಾಸ : ರಾಜಾಜಿ, ಕಾಮರಾಜ್ ನಾಡಾರ್, ಪೊಟ್ಟಿ ಶ್ರೀ ರಾಮುಲು, ಸಂಜೀವ ರೆಡ್ಡಿ, ಬೆಜವಾಡ ಗೋಪಾಲ್ ರೆಡ್ಡಿ, ಇ.ವಿ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ನಾಯಕರು. ರಾಮಸ್ವಾಮಿ ನಾಯ್ಕರ್, ಓ.ವಿ. ಅಳಗೇಶನ್, ಟೇಕೂರ್ ಸುಬ್ರಹ್ಮಣ್ಯಂ, ಬುಲುಸು ಸಾಂಬ ಮೂರ್ತಿ, ಗಂಟಸಾಲ ವೆಂಕಟೇಶ್ವರ ರಾವ್,  ಭಗತ್ ಸಿಂಗ್ ಅವರ ಅನುಯಾಯಿಗಳು, ಮಹಾವೀರ್ ಸಿಂಗ್, ಗಯಾ ಪ್ರಸಾದ್ ಮತ್ತು ಬಟುಕೇಶ್ವರ ದತ್ತ ಅವರನ್ನು ಬಳ್ಳಾರಿ ಜೈಲಿನಲ್ಲಿ ಬಂಧಿಸಲಾಗಿತ್ತು. ಮೊದಲ ಬಾರಿ ಸಿನಿಮಾ ನಟ ನನ್ನು ಈ ಜೈಲಿನಲ್ಲಿ ಇಡಲಾಗಿದೆ.

ಭದ್ರತೆ : ಕೇಂದ್ರ ಕಾರಾಗೃಹದಲ್ಲಿ ಹೈ ಸೆಕ್ಯುರಿಟಿ' ಸೌಲಭ್ಯವುಳ್ಳ ಸೆಲ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಗಣ್ಯವ್ಯಕ್ತಿಗಳನ್ನು ಇಡಲೆಂದೇ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿಹೈ ಸೆಕ್ಯುರಿಟಿ' ಸೌಲಭ್ಯವುಳ್ಳ ಸೆಲ್‌ಗಳಿವೆ. ಈಗಾಗಲೇ ಸ್ವಚ್ಛಗೊಳಿಸಿ ಸಿದ್ಧತೆ ಮಾಡಲಾಗುತ್ತಿದೆ. ಈ ಸೆಲ್‌ಗಳು ನೀರು, ಶೌಚಾಲಯ ಸೌಲಭ್ಯ ಸಹ ಹೊಂದಿವೆ. ಸೆಲ್‌ನಲ್ಲಿದ್ದುಕೊಂಡೇ ಕೋರ್ಟ್ ಕಲಾಪ ವೀಕ್ಷಿಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಸದ್ಯ ಹೈ ಸೆಕ್ಯುರಿಟಿ ಸೆಲ್ ದರ್ಶನ್ ಇಡಲು ಸಿದ್ದಗೊಳಿಸಲಾಗಿದೆ.

368 ಕೈದಿಗಳು : ಬಳ್ಳಾರಿ ಕೇಂದ್ರ ಕಾರಾಗೃಹ 8೦೦-1೦೦೦ ಕೈದಿಗಳ ಸಾಮರ್ಥ್ ವಿದೆ. ವಿಚಾರಣಾಧೀನ, ಬಂಧಿಗಳು ಸೇರಿ ಒಟ್ಟು 368 ಕೈದಿಗಳು ಸದ್ಯ ಜೈಲಿನಲ್ಲಿ ಇದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ 5 ಬ್ಲಾಕ್‌ಗಳು ಇವೆ. ಸಜಾ ಬಂದಿಗಳಿಗೆ 2೦೦ ಪ್ರತ್ಯೇಕ ಸೆಲ್‌ಗಳಿಗೆ. ಅಲ್ಲದೆ, ಗಣ್ಯವ್ಯಕ್ತಿಗಳನ್ನು ಇಡಲು `ಹೈ ಸೆಕ್ಯುರಿಟಿ
ಸೌಲಭ್ಯ ಸೆಲ್‌ಗಳು ಸಹ ಇವೆ.

ಬಾಕ್ಸ್ : ಕಳೆದ 2017 ರಲ್ಲಿ ತೆರೆಕಂಡಿದ್ದ ಕನ್ನಡದ ಚೌಕ' ಚಿತ್ರವನ್ನುಬಳ್ಳಾರಿ ಕೇಂದ್ರ ಕಾರಾಗೃಹ'ದ ಕೊನೆ ಭಾಗದ ಖಾಲಿ ಸೆಲ್‌ಗಳಲ್ಲಿ ಚಿತ್ರೀಕರಿಸಿತ್ತು. ಆಗ ಚಿತ್ರೀಕರಣದಲ್ಲಿ ನಟ ದರ್ಶನ್ ಸಹ ಭಾಗಿಯಾಗಿದ್ದರು. ಚಿತ್ರೀಕರಣಕ್ಕೆ ಬಳ್ಳಾರಿ ಜೈಲಿಗೆ ಬಂದಿದ್ದ ದರ್ಶನ್, ಇಂದು ಅದೇ ಜೈಲಲ್ಲಿ ಸೆರೆವಾಸಕ್ಕೆ ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net